ಜಯನಗರದಲ್ಲಿ 8ನೇ ವಾರ್ಷಿಕ ಅಜ್ಮೀರ್ ಮೌಲೀದ್ ಕಾರ್ಯಕ್ರಮ

0

ಸುಳ್ಯ :ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದ್ರಸ ಸಮಿತಿ ಆಶ್ರಯದಲ್ಲಿ ಇಂದು ಹಾಗೂ ನಾಳೆ 8 ನೇ ವಾರ್ಷಿಕ ಅಜ್ಮೀರ್ ಮೌಲೂದ್ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ಡಿ.30 ರಂದು ಜಯನಗರ ಮದ್ರಸ ವಠಾರದಲ್ಲಿ ನಡೆಯಿತು.

ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವನ್ನು ಮೊಗರ್ಪಣೆ ಜುಮ್ಮಾ ಮಸೀದಿ ಮುದರ್ರಿಸ್ ಹಾಫಿಳ್ ಶೌಖತ್ ಆಲಿ ಸಖಾಫಿ ಉದ್ಘಾಟಿಸಿದರು.
ಜಯನಗರ ಜೆ ಯು ಎಂ ಎಂ ಅಧ್ಯಕ್ಷ ಹಾಜಿ ಅಬ್ದುಲ್ಲಾ ರವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಪ್ರಭಾಷಣಕಾರರಾಗಿ ಭಾಗವಹಿಸಿದ್ದ ಖ್ಯಾತ ವಾಗ್ಮಿ ಪೇರೋಡ್ ಮುಹಮ್ಮದ್ ಅಝ್ಹರಿ ಉಸ್ತಾದ್ ರವರು ಮಾತನಾಡಿ ‘ಮನುಷ್ಯರ ಆಯುಷ್ಯ ಬಹಳ ಕೆಡಿಮೆಯಾದದ್ದು,ಮರಣ ಯಾವುದೇ ಸಂಧರ್ಭದಲ್ಲಿಯೂ ಬರ ಬಹುದು.ಅದಕ್ಕಾಗಿ ನಾವು ಒಳಿತುಗಳ ಮೂಲಕ ಸನ್ನದ್ಧ ರಾಗಿರ ಬೇಕಾಗಿದೆ.ಈ ಜೀವನಕ್ಕಿಂತ ಪರಲೋಕ ಜೀವನ ಶಾಶ್ವತ ವಾದದ್ದು ಅದನ್ನು ಎಂದಿಗೂ ಮರೆಯ ಬಾರದು ಎಂದರು.
ಸಯ್ಯದ್ ಝೈನುಲ್ ಆಬಿದಿನ್ ತಂಙಳ್ ಜಯನಗರ ದುವಾಶಿರ್ವಚನ ಮಾಡಿದರು.


ವೇದಿಕೆಯಲ್ಲಿ ಮೊಗರ್ಪಣೆ ಜಮಾಅತ್ ಕಮಿಟಿ ಉಪಾಧ್ಯಕ್ಷ ಸಿ ಎಂ ಉಸ್ಮಾನ್,ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಬೆಂಗಳೂರು ಉದ್ಯಮಿ ಅಬ್ದುಲ್‌ ರಹಿಮಾನ್ ಸಂಕೇಶ್, ದ ಕ ಮತ್ತು ಉಡುಪಿ ಜಿಲ್ಲಾ ಮೀಫ್ ಉಪಾಧ್ಯಕ್ಷ ಹಾಜಿ ಮುಸ್ತಫಾ ಜನತಾ,ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ಉಮ್ಮರ್ ಕೆ ಎಸ್,ಅನ್ಸಾರಿಯಾ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಲತೀಫ್ ಹರ್ಲಡ್ಕ, ಎಸ್ ಎಂ ಎ ಸುಳ್ಯ ಅಧ್ಯಕ್ಷ ಹಮೀದ್ ಸುಣ್ಣಮೂಲೆ,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ಇರುವಂಬಳ್ಳ ಜಮಾಯತ್ ಕಮಿಟಿ ಅಧ್ಯಕ್ಷ ಎಬಿ ಅಶ್ರಫ್ ಸಹದಿ,ಮೊಗರ್ಪನೆ ಎಚ್ ಐ ಜೆ ಕಮಿಟಿ ಸದಸ್ಯರುಗಳಾದ ಜಿ ಕೆ ಅಬ್ದುಲ್ ರಜ್ಜಾಕ್,ಅಬ್ದುಲ್ ಖಾದರ್ ಶಾಂತಿನಗರ, ಮುಅಲ್ಲಿಮ್ ಅಬ್ದುಲ್ ರಶೀದ್ ಝೖನಿ, ಯೂಸುಫ್ ನಿಜಾಮಿ, ಅಬೂಬಕ್ಕರ್ ಸಿದ್ದಿಕ್ ಸಅದಿ, ಮೂಸಾ ಮುಸ್ಲಿಯಾರ್, ಮೊದಲಾದವರು ಉಪಸ್ಥಿತರಿದ್ದರು.


ಎನ್ ಐ ಎಂ ಮದ್ರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿ ಸಿದ್ದೀಕ್ ನಾಹೂರು ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ನಿವಾಸಿ ರಕ್ತಧಾನಿ ಹಾಗೂ ಸಮಾಜ ಸೇವಕ ಶರೀಫ್ ಜಯನಗರ ಇವರನ್ನು ಗುರುತಿಸಿ ಸಮಿತಿ ವತಿಯಿಂದ ಗೌರವ ಸನ್ಮಾನ ನೀಡಲಾಯಿತು.

ಖ್ಯಾತ ಕಥಾ ಪ್ರಸಂಗ ನಿರೂಪಕರಾದ ಝುಬೈರ್ ಮಾಸ್ಟರ್ ತೋಟಿಕ್ಕಲ್ ಮತ್ತು ತಂಡದವರಿಂದ ಇಸ್ಲಾಮಿಕ್ ಕಥಾ ಪ್ರಸಂಗ ಕಾರ್ಯಕ್ರಮ ಹಾಗೂ ಸಾಮೂಹಿಕ ದುವಾ ಮಜ್ಲಿಸ್ ನಡೆಯಲಿದೆ.ಸಂಜೆ ಅಜ್ಮಿರ್ ಮೌಲಿದ್ ಮಜ್ಲಿಸ್ ನಡೆಯಲಿದೆ.