ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದಕ್ಷಿಣಕನ್ನಡ ಜಿಲ್ಲೆ
ದಲಿತ ಸೇನೆ ಕರ್ನಾಟಕ
ಭೀಮಾ ಆರ್ಮಿ ಕರ್ನಾಟಕ ಏಕತಾ ಮಿಷನ್
ಸಂಘಟನೆಗಳ ಜಂಟಿ ಆಶ್ರಯದಲ್ಲಿ
ಭೀಮಾ ಕೊರೆಂಗಾವ್ ಸಮರದ 207ನೇ ವರ್ಷಾಚರಣೆಯ ಕಾರ್ಯಕ್ರಮ ಸುಳ್ಯ ಕಾಂತಮಂಗಲ ಭೀಮಾಕಟ್ಡೆಯಲ್ಲಿ ನಡೆಯಿತು.
ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಆಯುಷ್ಮಾನ್ ಚಂದ್ರಶೇಖರ ಕೆ.ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಕಾಂತಮಂಗಲ ಶಾಲೆ ಎಸ್ ಡಿ ಎಂ ಸಿಯ ಅಧ್ಯಕ್ಷರಾದ ಆಯುಷ್ಮತಿ ಮೀರಾ ಕಾಂತಮಂಗಲ ಕ್ಯಾಂಡಲ್ ಉರಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ದಕ್ಷಿಣಕನ್ನಡ ಜರ್ನಲಿಸ್ಟ್ ಉಪಾಧ್ಯಕ್ಷ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಭೀಮಾ ಕೊರೆಂಗಾವ್ ಯುದ್ಧ ವಿಜಯೋತ್ಸವದ ಪ್ರಮುಖ ಭಾಷಣವನ್ನು ಭೀಮಾ ಆರ್ಮಿ ಕರ್ನಾಟಕ ಏಕತಾ ಮಿಷನ್ ರಾಜ್ಯ ಉಪಾಧ್ಯಕ್ಷರಾದ ಪಂಡಿತ್ ಜಯಕುಮಾರ್ ಹಾದಿಗೆ ಮಾಡಿದರು. ವೇದಿಕೆಯಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಕರುಣಾಕರ ಪಿ.ಆರ್.ಪಲ್ಲತ್ತಡ್ಕ, ಭೀಮಾ ಆರ್ಮಿ ಕರ್ನಾಟಕ ಏಕತಾ ಮಿಷನ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ವಿವೇಕಾನಂದ ಶಿರ್ತಾಡಿ,ಸುಳ್ಯ ತಾಲೂಕು ಭೀಮಾ ಆರ್ಮಿ ಕರ್ನಾಟಕ ಏಕತಾ ಮಿಷನ್ ಅಧ್ಯಕ್ಷರಾದ ವಸಂತ ಕುದ್ಪಾಜೆ,ಕಡಬ ತಾಲೂಕು ಭೀಮಾ ಆರ್ಮಿ ಕರ್ನಾಟಕ ಏಕಾತ ಮಿಷನ್ ಅಧ್ಯಕ್ಷರಾದ ತಾರಾನಾಥ್ ಕದಿರಡ್ಕ,ಸುಳ್ಯ ತಾಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಡಿ.ಪಿ. ದೊಡ್ಡೇರಿ,ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಎಂ.ಎಸ್.ಮೇನಾಲ, ಕು| ಮಾಲತಿ LLB ,ಪುತ್ತಿಲ ಗಂಧದಗುಡ್ಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಆಯೋಜನೆಯನ್ನು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ತಾಲೂಕು ಕಾರ್ಯದರ್ಶಿ ಸುನೀಲ್ ಗಂಧದ ಗುಡ್ಡೆ ಹಾಗೂ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿ ಕಾರ್ಯಕ್ರಮವನ್ನು ನಿರೂಪಿಸಿದರು.