ಅಧ್ಯಕ್ಷರಾಗಿ ಸಯ್ಯಿದ್ ಕುಂಞಿಕೋಯ ಸಅದಿ ತಂಙಳ್ ಪುನರಾಯ್ಕೆ
ಸುನ್ನೀ ಜಂಇಯ್ಯತುಲ್ ಉಲಮಾ ಸುಳ್ಯ ಝೋನ್ ಸಮಿತಿಯ ಮಹಾಸಭೆ ಗಾಂಧಿನಗರ ಸುನ್ನೀ ಸೆಂಟರ್ ಸಭಾಂಗಣ ದಲ್ಲಿ ಅಧ್ಯಕ್ಷರಾದ ಸಯ್ಯಿದ್ ಕುಂಞಿಕೋಯ ಸಅದಿ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯ ವಿದ್ವಾಂಶ ಹನೀಫ್ ಸಅದಿ ಪಂಜಿಕ್ಕಲ್ ರವರು ಸಭೆಯ ಉಧ್ಘಾಟನೆ ಮಾಡಿದರು.
ಜೊತೆ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್‌ರಿ ಅಲ್-ಫುರ್ಖಾನಿ ವರದಿ ಹಾಗೂ ಲೆಕ್ಕಪತ್ರ ವಾಚಿಸಿದರು. ಬಳಿಕ ರಾಜ್ಯ ಜಂಇಯ್ಯತುಲ್ ಉಲಮಾ ಮುಶಾವರ ನಾಯಕರಾದ ಆದಂ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಯ್ಯಿದ್ ಕುಂಞಿಕೋಯ ಸಅದಿ ತಂಙಳ್ ಸುಳ್ಯ,ಪ್ರಧಾನ ಕಾರ್ಯದರ್ಶಿ ಯಾಗಿ ಉಸ್ಮಾನ್ ಸಖಾಫಿ ನಾವೂರು ಸುಳ್ಯ, ಕೋಶಾಧಿಕಾರಿಯಾಗಿ ಅಬ್ದುಲ್ಲಾಹಿ ಸಅದಿ ಮೇನಾಲ ಅಜ್ಜಾವರ, ಉಪಾಧ್ಯಕ್ಷರುಗಳಾಗಿ ಅಬ್ಬಾಸ್ ಫೈಝಿ ಅಡ್ಕಾರು, ಹನೀಫ್ ಸಅದಿ ಪಂಜಿಕ್ಕಲ್, ಜೊತೆ ಕಾರ್ಯದರ್ಶಿ ಗಳಾಗಿ ಜುನೈದ್ ಸಖಾಫಿ ಜೀರ್ಮುಖಿ, ಎ ಎಂ ಫೈಝಲ್ ಝುಹ್‌ರಿ ಅಲ್-ಫುರ್ಖಾನಿ ಹಾಗೂ ಸಮಿತಿ ಸದಸ್ಯರುಗಳಾಗಿ ಅಬ್ದುಲ್ಲಾ ಸಖಾಫಿ ಪಾರೆ, ಶಾಫಿ ಸಖಾಫಿ ಮೇನಾಲ, ಜಬ್ಬಾರ್ ಸಖಾಫಿ ಅಜ್ಜಾವರ, ಹಸೈನಾರ್ ಮದನಿ ಇರುವಂಬಳ್ಳ, ಹಾಫಿಳ್ ಕಬೀರ್ ಹಿಮಮಿ ಕೊಯಂಗಿ, ಅಬ್ದುಲ್ಲತೀಫ್ ಜೌಹರಿ ಮೇನಾಲ, ಅಬ್ದುಲ್ ಖಾದರ್ ಮದನಿ ಅಜ್ಜಾವರ, ಇಸ್ಮಾಯಿಲ್ ಸಅದಿ ಕುಂಬಕ್ಕೋಡು, ಅಬ್ದುರ್ರಹ್ಮಾನ್ ಸಅದಿ ಸುಣ್ಣಮೂಲೆ ರವರುಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾಹಿ ಸಅದಿ ಅಜ್ಜಾವರ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ವಂದಿಸಿದರು.