ಕರ್ನಾಟಕ ಪ್ರೌಢ ಶಾಲಾ ಪರೀಕ್ಷಾ ಮಂಡಳಿ ಬೆಂಗಳೂರು ಇದರಿಂದ ನಡೆಸಲ್ಪಡುವ ಡ್ರಾಯಿಂಗ್ ಪರೀಕ್ಷೆಗೆ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಒಟ್ಟು 9 ವಿದ್ಯಾರ್ಥಿಗಳು ಹಾಜರಾಗಿದ್ದು 6 ಮಂದಿ ಉನ್ನತ ಶ್ರೇಣಿ ಹಾಗೂ 3 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಶಾಲೆಗೆ ಶೇಕಡಾ 100 ಫಲಿತಾಂಶ ಲಭಿಸಿರುತ್ತದೆ. ಲೋಯರ್ ಗ್ರೇಡ್ ವಿಭಾಗದಲ್ಲಿ 8 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪ್ರತೀಕ್ಷಾ 506 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಇವರು ಅಂಬಟಡ್ಕ ನಿವಾಸಿ ನೇಮಿಚಂದ್ರ ಹಾಗೂ ಕೆವಿಜಿ ಐಪಿಎಸ್ ಶಿಕ್ಷಕಿ ದಿವ್ಯ ಇವರುಗಳ ಪುತ್ರಿಯಾಗಿರುತ್ತಾರೆ.
ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿ ಡಾ. ಉಜ್ವಲ್ ಯು ಜೆ,ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಹಾಗೂ ಬೋಧಕ ಬೋಧಕೇತರ ವರ್ಗದವರು ಅಭಿನಂದಿಸಿರುತ್ತಾರೆ.