ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈ ನಿವೃತ್ತಿ – ಸನ್ಮಾನ ಹಾಗೂ ಬೀಳ್ಕೊಡುಗೆ

0

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈ ನೆಲ್ಯಾಜೆಯವರು ಡಿ.೩೧ ರಂದು ಸೇವಾ ನಿವೃತ್ತಿಗೊಂಡಿದ್ದು ಅವರಿಗೆ ಸಂಘದ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಡಿ.೩೧ ರಂದು ಸಂಘದ ಸಭಾಭವನದಲ್ಲಿ ನಡೆಯಿತು.


ಹಿರಿಯ ಸಹಕಾರಿ ಧುರೀಣ ಚಿದಾನಂದ ಪಾಟಾಜೆಯವರು ವಿಜಯ ರೈ ಮತ್ತು ಶ್ರೀಮತಿ ನಳಿನಾಕ್ಷಿ ದಂಪತಿಯನ್ನು ಶಾಲು ಹೊದಿಸಿ, ಫಲ, ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭಹಾರೈಸಿದರು.


ಸನ್ಮಾನ ಸ್ವೀಕರಿಸಿದ ವಿಜಯ ರೈಯವರು ಸುದೀರ್ಘ ೪೧ ವರ್ಷಗಳ ತಾನು ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಸಿಕೊಂಡು ಸಹಕರಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಘದ ಮುಂದಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀಮತಿ ಸುನಂದಾ ಆಳ್ವರವರು ಅಧಿಕಾರ ವಹಿಸಿಕೊಂಡರು.


ಈ ಸಂದರ್ಭದಲ್ಲಿ ವಿಜಯ ರೈಯವರ ಪುತ್ರ ಪವನ್ ಕುಮಾರ್, ಪುತ್ರಿ ಪ್ರಣಮ್ಯ, ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ, ಬೆಳ್ಳಾರೆ ಡಿ.ಸಿ.ಸಿ.ಬ್ಯಾಂಕ್ ಶಾಖಾಧಿಕಾರಿ ಸಂತೋಷ್, ಸಂಘದ ನಿರ್ದೇಶಕರಾದ ಅನಿಲ್ ರೈ ಚಾವಡಿಬಾಗಿಲು, ಕರುಣಾಕರ ಆಳ್ವ, ವಿಠಲದಾಸ್, ಶ್ರೀಮತಿ ಶಾರದಾ, ಶ್ರೀಮತಿ ನಿರ್ಮಲ ಹಾಗೂ ಆಡಳಿತ ಮಂಡಳಿಯ ನೂತನ ನಿರ್ದೇಶಕರಾದ ರಾಮಕೃಷ್ಣ ಭಟ್ ಕೆ, ಪದ್ಮನಾಭ ಶೆಟ್ಟಿ, ನಾರಾಯಣ ಕೆ, ಭಾಸ್ಕರ ಗೌಡ ಎನ್, ಜನಾರ್ಧನ ಎ, ಐತ್ತಪ್ಪ ರೈ, ವಾಸುದೇವ ನಾಯಕ್, ಸುಂದರ, ಬಿಯಾಳು, ಶ್ರೀಮತಿ ಭಾರತಿ ಕೆ, ವನಿತಾ ಎಸ್. ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಶ್ರೀಮತಿ ಗುಲಾಬಿ ಸನ್ಮಾನ ಪತ್ರ ವಾಚಿಸಿದರು. ರವೀಂದ್ರ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಿಬ್ಬಂದಿವರ್ಗದವರು ಸಹಕರಿಸಿದರು.