ಹರಿಹರದ ಪಲ್ಲತಡ್ಕದ ಕಾರು ಕೈಕಂಬದಲ್ಲಿ ಚರಂಡಿಗೆ

0

ಹರಿಹರ ಪಲ್ಲತಡ್ಕ ದ ಕಾರೊಂದು ಕೈಕಂಬದ ವೆಂಕಟಾಪುರದಲ್ಲಿ ಚರಂಡಿಗೆ ಬಿದ್ದು ಪ್ರಯಾಣಿಕರೋರ್ವರಿಗೆ ಗಾಯವಾದ ಘಟನೆ ಡಿ.30 ರಂದು ವರದಿಯಾಗಿದೆ.

ಹರಿಹರ ಪಲ್ಲತಡ್ಕ ಉಮೇಶ್ ಕಜ್ಜೋಡಿ ಅವರು ತನ್ನ ಕಾರಲ್ಲಿ ಕಡಬಕ್ಕೆ ಹೋಗಿ ಹಿಂತಿರುಗಿ ಬರುತಿದ್ದಾಗ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಕಾರಲ್ಲಿದ್ದ ದೇವಕಿ ಎಂಬವರಿಗೆ ಗಾಯಗಳಾಗಿವೆ. ಅವರನ್ನು ಸುಳ್ಯದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಅಪಾರ ನಷ್ಟ ಉಂಟಾಗಿರುವುದಾಗಿ ತಿಳಿದು ಬಂದಿದೆ.