ರೇಶನ್ ಕಾರ್ಡ್ ಗಳಲ್ಲಿ ಹೆಸರು ತಿದ್ದುಪಡಿ ಸಹಿತ ಇತರ ತಿದ್ದುಪಡಿಗಳಿದ್ದರೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಜ.31ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು ಬೆಳಿಗ್ಗೆ 10.00 ರಿಂದ ಸಂಜೆ 05.00 ಗಂಟೆ ಅವಕಾಶ ನೀಡಲಾಗಿದ್ದು ರೇಶನ್ ಕಾರ್ಡ್ ಗಳಲ್ಲಿ ಸದಸ್ಯರ ಹೆಸರು ತಿದ್ದುಪಡಿ/ಸೇರ್ಪಡೆ – ಸದಸ್ಯರ ಫೊಟೋ ಬದಲಾವಣೆ -ಕುಟುಂಬದ ಮುಖ್ಯಸ್ಥರ ಬದಲಾವಣೆ ಮಾಡಬಹುದು.
ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಮಾತ್ರ ಅವಕಾಶವಿದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸದ್ಯ ಅವಕಾಶ ಇಲ್ಲ ಬಂದಾಗ ತಿಳಿಸಲಾಗುವುದು ಎಂದು ಆಹಾರ ನಿರೀಕ್ಷಕರು ಮಾಹಿತಿ ನೀಡಿದ್ದಾರೆ.