ಇಂದು ಭಜನೋತ್ಸವ ಹಾಗೂ ಸತ್ಯನಾರಾಯಣ ಪೂಜೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ
ಅಮರಮುಡ್ನೂರಿನ ಕುಕ್ಕುಜಡ್ಕ ವಿಷ್ಣುನಗರದ ಶ್ರೀ ವಿಷ್ಣುಮೂರ್ತಿ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ 71 ನೇ ವರ್ಷದ ವಾರ್ಷಿಕೋತ್ಸವವು ಕ್ಷೇತ್ರದ ಆಚಾರ್ಯ ರಾಗಿರುವ ಬ್ರಹ್ಮಶ್ರೀ ವೇ.ಮೂ. ನೀಲೇಶ್ವರ ಪದ್ಮನಾಭ ತಂತ್ರಿಯವರ ನಿರ್ದೇಶನದಂತೆ
ಜ.1 ರಿಂದ 3 ರ ತನಕ ನಡೆಯಲಿದ್ದು ಇಂದು ಬೆಳಗ್ಗೆ ಅರ್ಚಕರ ಮೇಲೆ ವೈದಿಕಕಾರ್ಯಕ್ರಮದೊಂದಿಗೆ ಆರಂಭಗೊಂಡಿತು.
ಬೆಳಗ್ಗೆ ಶ್ರೀ ಮಹಾವಿಷ್ಣು ಭಜನಾ ಮಂಡಳಿಯ ನೇತೃತ್ವದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನಿರಂತರ ಭಜನಾ ಸಂಕೀರ್ತನೆಯ ಭಜನೋತ್ಸವವು ನಡೆಯಿತು.
ಮಧ್ಯಾಹ್ನ ಅರ್ಚಕರ ನೇತೃತ್ವದಲ್ಲಿ ಬೆಳಗ್ಗೆ ದೈವಗಳಿಗೆ ಹೊರೆ ಕಾಣಿಕೆ ಸಮರ್ಪಣೆಯಾಗಿ ಗಣಹೋಮವಾಗಿ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆಯು ನಡೆಯಿತು. ಮಧ್ಯಾಹ್ನಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಆಗಮಿಸಿದ ಭಕ್ತಾದಿಗಳಿಗೆಅನ್ನಸಂತರ್ಪಣೆಯಾಯಿತು.
ಸಂಜೆ ಕುಕ್ಕುಜಡ್ಕ ಶ್ರೀ ಮಹಾವಿಷ್ಣು ಮಕ್ಕಳ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆಯು ನಡೆಯಲಿರುವುದು.
ಬಳಿಕ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ಇಳಿದು ರಕ್ತೇಶ್ವರಿ, ಧರ್ಮಸ್ಥಳ ಪಂಜುರ್ಲಿ ,ಜಾವತೆ, ಮಂತ್ರವಾದಿ ಗುಳಿಗ, ರಕ್ತೇಶ್ವರಿ ಗುಳಿಗ,ಕಲ್ಕುಡ ಕಲ್ಲುರ್ಟಿ ಮತ್ತು ಅಂಗಾರ ಬಾಕುಡ ದೈವಗಳ ನರ್ತನ ಸೇವೆಯು ನಡೆಯಲಿದೆ. ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ಯಾಗಲಿರುವುದು ಎಂದು ದೈವಸ್ಥಾನದ
ವ್ಯವಸ್ಥಾಪಕ ರಾದ ಯಂ.ಜಿ.ಸತ್ಯನಾರಾಯಣ ರವರು ತಿಳಿಸಿದರು.