ಮಾಸ್ತಿಕಟ್ಟೆಯಲ್ಲಿ ನೂತನ ಬಸ್ ತಂಗುದಾಣ ಉದ್ಘಾಟನೆ
ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಇಲ್ಲಿಗೆ ಜಿಲ್ಲಾ ಗವರ್ನರ್ ಲ|ಬಿ.ಎಂ.ಭಾರತಿ ಪಿಎಂಜೆಎಫ್ ಇವರು ಅಧಿಕೃತವಾಗಿ ಇತ್ತೀಚೆಗೆ ಭೇಟಿ ನೀಡಿದರು.
ಜೆಡಿ ಅಡಿಟೋರಿಯಂನಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷೆ ಲ. ಉಷಾ ಬಿ.ಭಟ್‌ರವರು ವಹಿಸಿದ್ದರು. ಜಿಲ್ಲಾ ಗವರ್ನರ್ ಲ. ಬಿಎಂ ಭಾರತಿಯವರು ದೀಪ ಬೆಳಗಿಸಿ ಚಾರ್ಟರ್ ನೈಟ್ ಕಾರ್ಯಕ್ರಮ ಉದ್ಘಾಟಿಸಿ ಕ್ಲಬ್‌ನ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಕ್ಲಬ್ ಅಧ್ಯಕ್ಷ ಉಷಾ ಬಿ. ಭಟ್‌ರವರು ಕೊಡಮಾಡಿದ ಸೇವಾ ಚಟುವಟಿಕೆಯಾದ, ಅಂಗವಿಕಲೆ ಪ್ರಸ್ತುತ ಸುಬ್ರಹ್ಮಣ್ಯದ ಕೆಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ಚೈತನ್ಯಳಿಗೆ ರೂ. 5೦೦೦ ವನ್ನು ಹಸ್ತಾಂತರಿಸಲಾಯಿತು. ಬೆಳ್ಳಾರೆ ಗ್ರಾ.ಪಂ. ಗ್ರಂಥಾಲಯಕ್ಕೆ ಕೊಡುಗೆ ನೀಡಲಾಯಿತು. ಇದೇ ಸಂದರ್ಭ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಗೆ ಎಂ.ಕೆ.ಶೆಟ್ಟಿ ಸೇರ್ಪಡೆಗೊಂಡರು. ಇತ್ತೀಚೆಗೆ ಎಲ್‌ಐಸಿಎಫ್‌ಗೆ ದೇಣಿಗೆ ನೀಡಿದ ಕ್ಲಬ್ ಅಧ್ಯಕ್ಷೆ ಉಷಾ ಬಿ.ಭಟ್‌ರವರನ್ನು ಕ್ಲಬ್ ವತಿಯಿಂದ ರಾಜ್ಯಪಾಲರು ಸನ್ಮಾನಿಸಿದರು. ವೇದಿಕೆಯಲ್ಲಿ ಕ್ಯಾಬಿನೆಟ್ ಸೆಕ್ರೆಟರಿ ಗೀತಾ ರಾವ್ ಪಿಎಂಜೆಎಫ್, ರೀಜನಲ್ ಚೇರ್‌ಪರ್ಸನ್ ಲ.ಗಂಗಾಧರ ರೈ, ಲ.ಗೋವರ್ಧನ ಶೆಟ್ಟಿ, ಲ. ವೆಂಕಟೇಶ್ ಹೆಬ್ಬಾರ್ ಉಪಸ್ಥಿತರಿದ್ದರು.
ಕೋಶಾಧಿಕಾರಿ ಲ. ಈಶ್ವರ್ ವಾರಣಾಸಿ ವಂದಿಸಿದರು. ಸಾಗರ್ ಪ್ರಾರ್ಥಿಸಿದರು.
ಮಾಸ್ತಿಕಟ್ಟೆಯಲ್ಲಿ ನೂತನ ಬಸ್ ತಂಗುದಾಣ ಉದ್ಘಾಟನೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಬೆಳ್ಳಾರೆ ಜಲದುರ್ಗ ಲಯನ್ಸ್ ಕ್ಲಬ್ ವತಿಯಿಂದ ಕೊಡಮಾಡಿದ ಬಸ್ ತಂಗುದಾಣವನ್ನು ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಜಿಲ್ಲಾ ಗವರ್ನರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಲ. ಗೀತಾ ರಾವ್ ಪಿಎಂಜೆಎಫ್, ರೀಜನಲ್ ಅಂಬಾಸಿಡರ್ ಲ. ರೇಣುಕಾ ಸದಾನಂದ ಜಾಕೆ ಎಂಜೆಎಫ್, ಐಪಿಪಿ ವಿಠಲ ಶೆಟ್ಟಿ, ಸುಳ್ಯ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಲ. ಸದಾನಂದ ಜಾಕೆ ಎಂಜೆಎಫ್, ಕಾರ್ಯದರ್ಶಿ ಲ. ಚೇತನ್ ಶೆಟ್ಟಿ, ಕೋಶಾಧಿಕಾರಿ ಲ. ಈಶ್ವರ್ ವಾರಣಾಸಿ, ಸದಸ್ಯರು ಉಪಸ್ಥಿತರಿದ್ದರು.