ಹಣಕಾಸು ವಲಯದಲ್ಲಿ ವಿಶ್ವಾಸ ಅತೀ ಮುಖ್ಯ, ಸಂಸ್ಥೆ ಉನ್ನತ ರೀತಿಯಲ್ಲಿ ಬೆಳೆಯಲಿ: ಮಾಜಿ ಸಚಿವ ಎಸ್.ಅಂಗಾರ
ಕಡಿಮೆ ಅವಧಿಯಲ್ಲಿ ನಂಬಿಕೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ- ಸ್ಥಾಪಕ ಸದಸ್ಯ ಆಲ್ವಿನ್ ಜೋಯಲ್ ನೊರೊನ್ಹಾ
ಬ್ಯಾಂಕೇತರ ಹಣಕಾಸು ವಲಯದಡಿ ಒಂದು ಹೊಸ ಮೈಲುಗಲ್ಲು ಇಡುತ್ತಿರುವ ಇಂಡಿಯನ್ ಪಾರ್ಟನರ್‌ಶಿಪ್ ಆಕ್ಟ್ ೧೯೩೨ರ ಅಡಿಯಲ್ಲಿ ನೋಂದಾಯಿಸಲಾಗಿರುವ ಡಿ.ಕೆ.ಗ್ರೂಪ್ ಆಫ್ ಕಂಪೆನೀಸ್ ಜ.1 ರಂದು ಸುಳ್ಯದಲ್ಲಿ ಉದ್ಘಾಟನೆಗೊಂಡಿತು.
ಬೆಳಿಗ್ಗೆ ಆರ್ಚಕ ಅಭಿರಾಮ್‌ರವರ ಪೌರೋಹಿತ್ಯದಲ್ಲಿ ಸುಳ್ಯದ ಶ್ರೀಹರಿ ಬಿಲ್ಡಿಂಗ್‌ನಲ್ಲಿರುವ ಕಚೇರಿಯಲ್ಲಿ ಗಣಹೋಮ, ಲಕ್ಷ್ಮಿ ಪೂಜೆ ನಡೆಯಿತು. ಬಳಿಕ ಸಂಸ್ಥೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ, ಶುಭ ಹಾರೈಸಿದರು.
ಬಳಿಕ ರಂಗಮಯೂರಿ ಕಲಾ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪಕ ಪಾಲುದಾರರು ಹಾಗೂ ಸ್ಥಾಪಕ ಸದಸ್ಯರು ಡಿ.ಕೆ.ಗ್ರೂಪ್ ಆಫ್ ಕಂಪೆನಿಸ್‌ನ ಆಲ್ವಿನ್ ಜೋಯಲ್ ನೊರೊನ್ಹಾ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ ಹಾಗೂ ಗಣ್ಯರು ಸೇರಿ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಎಂ.ಬಿ.ಸದಾಶಿವರವರು ನೂತನ ವರ್ಷಕ್ಕೆ ಸುಳ್ಯಕ್ಕೆ ಹೊಸ ಕೊಡುಗೆಯಾಗಿ ಈ ಸಂಸ್ಥೆ ಪ್ರಾರಂಭಗೊ0ಡಿದೆ. ಸಾಕಾಷ್ಟು ಜನರಿಗೆ ಉದ್ಯೋಗ ಸೃಷ್ಠಿ ಮಾಡಿರುವ ಈ ಸಂಸ್ಥೆ ಜನ ಸೇವೆ ಮಾಡುವುದರೊಂದಿಗೆ ನೀವು ಕೂಡ ಗಟ್ಟಿಯಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.
ವ್ಯವಸ್ಥಾಪಕ ಪಾಲುದಾರ ಹಾಗೂ ಶಾಖಾಧ್ಯಕ್ಷ ವೆಂಕಟ್ರಮಣ ಮುಳ್ಯ ಸ್ವಾಗತಿಸಿ, ಮಾತನಾಡಿ ಹಣಕಾಸಿನ ವಲಯದಲ್ಲಿ ಜವಾಬ್ದಾರಿ ಎಷ್ಟು ಇದ್ದರೂ ಸಾಲದು. ಹಾಗಾಗಿ ಈ ಡಿ.ಕೆ.ಗ್ರೂಫ್ ಆಫ್ ಕಂಪೆನಿಸ್ ಕಾನೂನಾತ್ಮಕ ರೀತಿಯಲ್ಲಿ ನಡೆಯುವಂತಹದು. ಹಾಗಾಗಿ ಇದರ ಮೇಲೆ ಹ್ರಾಹಕರು ನಂಬಿಕೆ ಇಡಬಹುದು. ಈಗಿನ ಕಾಲದಲ್ಲಿ ಈ ರೀತಿಯ ವ್ಯವಹಾರದಲ್ಲಿಯೇ ಜನರನ್ನು ತೊಡಗಿಸಿಕೊಳ್ಳುತ್ತಾರೆ ಯಾಕೆಂದರೆ ಸಹಕಾರ ಸಂಘಗಳಲ್ಲಿ ಕೃಷಿ ಭೂಮಿ ಹೊಂದಿರುವ ರೈತನಿಗೆ ಸಾಲ ನೀಡಲಾಗುತ್ತದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜನ ನೋಡಿ ಸಾಲವನ್ನು ನಿಡಲಾಗುತ್ತದೆ ಹಾಗಾಗಿ ಈ ರೀತಿಯ ವ್ಯವಸ್ಥೆಯಲ್ಲಿ 30% ಜನರಿಗೆ ಪ್ರಯೋಜನ ಸಿಗುತ್ತದೆ. 70% ಜನರು ವಂಚಿತರಾಗುತ್ತಾರೆ ಅಂತವರಿಗೆ ನಮ್ಮಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ ಎಂದರು.
ಇದರೊ0ದಿಗೆ ಪಿಗ್ಮಿ, ಆರ್‌ಡಿ, ಚಿಟ್‌ಪಂಡ್ಸ್ ಇನ್ನಿತರ ಯೋಜನೆಗಳು ಇದೆ ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.
ಬಳಿಕ ಮಾತನಾಡಿದ ವ್ಯವಸ್ಥಾಪಕ ಪಾಲುದಾರರು ಹಾಗೂ ಸ್ಥಾಪಕ ಸದಸ್ಯರು ಡಿ.ಕೆ.ಗ್ರೂಪ್ ಆಫ್ ಕಂಪೆನಿಸ್‌ನ ಆಲ್ವಿನ್ ಜೋಯಲ್ ನೊರೊನ್ಹಾರವರು ಜಿಲ್ಲೆಯ ಹಲವು ಕಡೆ ಪ್ರಾರಂಭಗೊ0ಡಿರುವ ಸಂಸ್ಥೆಯು ೬೦೦೦ ಕ್ಕಿಂತ ಹೆಚ್ಚಿನ ಗ್ರಾಹಕರನ್ನು ಕಡಿಮೆ ಅವಧಿಯಲ್ಲಿ ಪಡೆದುಕೊಂಡಿದೆ.
ನಮ್ಮ ಈ ಸಂಸ್ಥೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿದೆ, 1 ಲಕ್ಷದ ಸಾಲವನ್ನು ಕಡಿಮೆ ಡಾಕ್ಯೂಮೆಂಟ್ ನೊಂದಿಗೆ ಗ್ರಾಹಕರಿಗೆ ನೀಡುತ್ತೇವೆ. ಇದರೊಂದಿಗೆ ೬ ಲಕ್ಷದವರೆಗೆ ಕೂಡ ಸಾಲ ನೀಡಲಾಗುತ್ತದೆ. ಹಾಗೂ ಸಂಸ್ಥೆಯಲ್ಲಿ ಸಾಕಷ್ಟು ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಜಿಲ್ಲೆಯ ನಂಬಿಕೆ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಟ್ಟಡ ಮಾಲಕ ಕೃಷ್ಣ ಕಾಮತ್, ಉದ್ಯಮಿ ಅಶೋಕ್ ಪ್ರಭು, ಶ್ರೀ ಮಹಾಗಣಪತಿ ಭಜನಾ ಮಂದಿರ ಮುಳ್ಯ ಅಟ್ಲೂರು ಇದರ ಅಧ್ಯಕ್ಷ ಪ್ರಕಾಶ್ ತೋರಣಗುಂಡಿ, ಪಾಲದಾರರು ಹಾಗೂ ಶಾಖಾ ಉಪಾಧ್ಯಕ್ಷ ಶಿವಪ್ರಕಾಶ್ ಕಡಪಳ ಅಡ್ಡನಪಾರೆ, ಪಾಲದಾರರು ಹಾಗೂ ಶಾಖಾ ಕಾರ್ಯದರ್ಶಿ ಎಸ್.ಸತೀಶ್ ನಾಯಕ್, ಸಿ..ಎ.ಬ್ಯಾಂಕ್ ಪೂರ್ವಾಧ್ಯಕ್ಷ ಸುಬೋದ್ ಶೆಟ್ಟಿ ಮೇನಾಲ, ಉದ್ಯಮಿ ಸುಧಾಕರ ಕಾಮತ್, ಮಂಗಳೂರು ಬ್ರಾಂಚ್ ಅಧ್ಯಕ್ಷೆ ಪ್ರೇಮಾ ಕೊಟ್ಯಾನ್, ಕಡಬ ಶಾಖೆ ಅಧ್ಯಕ್ಷ ಆದಂ, ಗುತ್ತಿಗಾರು ಶಾಖೆ ಅಧ್ಯಕ್ಷ ಸೀತರಾಮ ಹೊಸೊಳಿಕೆ ಸೇರಿದಂತೆ ಗಣ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಸಂಸ್ಥೆಯ ಉದ್ಯೋಗಿ ರಶ್ಮಿತಾ ತಂಡ ಪ್ರಾರ್ಥಿಸಿ, ಪಾಲದಾರರು ಹಾಗೂ ಶಾಖಾ ಕಾರ್ಯದರ್ಶಿ ಎಸ್.ಸತೀಶ್ ನಾಯಕ್ ಧನ್ಯವಾದ ಗೈದರು. ನಿವೃತ್ತ ಶಿಕ್ಷಕ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.