ಕುಣಿತ ಭಜನೆ ಹಾಗೂ ಅಯ್ಯಪ್ಪ ವೃತಧಾರಿಗಳ ಪೇಟ ತುಳ್ಳಲ್ ಆಕರ್ಷಕ ಮೆರವಣಿಗೆ
ಸುಳ್ಯ ಕಸಬಾದ ಕೊಡಿಯಾಲಬೈಲು ಬ್ರಹ್ಮರಗಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ 47 ನೇ ವರ್ಷದ ಅಯ್ಯಪ್ಪ ದೀಪೋತ್ಸವ ಮತ್ತು ರಂಗಪೂಜಾ ಮಹೋತ್ಸವವು ಜ.1 ರಂದು ಜರುಗಿತು.
ಬೆಳಗ್ಗೆ ಅರ್ಚಕರಿಂದ 24 ತೆಂಗಿನಕಾಯಿಯ ಮಹಾಗಣಪತಿ ಹೋಮವು ನಡೆದು ಕೊಪ್ಪರಿಗೆ ಮುಹೂರ್ತ ನೆರವೇರಿತು.
ದೇವರಿಗೆ ವಿಶೇಷವಾಗಿ ಸೀಯಾಳಾಭಿಷೇಕ ನವಕ ಕಲಾಶಾಭಿಷೇಕವಾಗಿ ಮಹಾಪೂಜೆಯಾಗಿ
ಪ್ರಸಾದವಿತರಣೆ ಮತ್ತು
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು.
ಸಂಜೆ ಹಳೆಗೇಟು ಗಣಪತಿ ಕಟ್ಟೆಯ ಬಳಿಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ತನಕ
ನೂರಾರು ಭಜಕರ ಆಕರ್ಷಕ ಕುಣಿತ ಭಜನೆ ಹಾಗೂ ಮಕ್ಕಳ ದೀಪದಾನದ ದೀಪದ ಬೆಳಕಿನೊಂದಿಗೆ ಅಯ್ಯಪ್ಪ ಸ್ವಾಮಿ ವೃತಧಾರಿಗಳಿಂದ ಪೇಟ ತುಳ್ಳಲ್ ಚೆಂಡೆ ವಾದನದೊಂದಿಗೆ ಮೆರವಣಿಗೆಯು ನೂರಾರು ಭಕ್ತರ ಸಮ್ಮುಖದಲ್ಲಿ ಸಾನಿಧ್ಯದ ತನಕ ಸಾಗಿ ಬಂತು.
ಸ್ಥಳೀಯ ಭಜನಾ
ತಂಡದ ಸದಸ್ಯರಿಂದ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮವು ನಡೆಯಿತು. ಸಾನಿಧ್ಯದಲ್ಲಿ ದೀಪಾರಾಧನೆಯೊಂದಿಗೆ ಚೆಂಡೆ ವಾದನ ಪ್ರದರ್ಶನವಾಯಿತು. ರಾತ್ರಿ ತಂತ್ರಿಯವರ ನೇತೃತ್ವದಲ್ಲಿ ವಿಶೇಷ ರಂಗಪೂಜೆ ಮಹೋತ್ಸವವು ನಡೆದು ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಈ ಸಂದರ್ಭದಲ್ಲಿ ಜ್ಯೋತಿಷಿ ಮಧುಸೂಧನ್. ಎಂ ವೈದ್ಯ ಕಾಸರಗೋಡು ರವರಿಗೆ ಗೌರವಾರ್ಪಣೆ ಮಾಡಲಾಯಿತು.
ಕುಣಿತ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಭಜಕರಿಗೆ ದೇವಸ್ಥಾನದ ಸಮಿತಿಯ ವತಿಯಿಂದ ಅಧ್ಯಕ್ಷ ಗಣೇಶ್ ಪೈಚಾರು ರವರು ಶಾಲು ಹೊದಿಸಿ ಗೌರವಿಸಿದರು. ಸಮಿತಿಯ ಪದಾಧಿಕಾರಿಗಳು
ಮತ್ತು ಸದಸ್ಯರು ಉಪಸ್ಥಿತರಿದ್ದರು.
ರಾತ್ರಿಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ- ಸಾಹಿತ್ಯ- ಸಂಭ್ರಮ ಕಾರ್ಯಕ್ರಮ ಪ್ರದರ್ಶನವಾಯಿತು.
ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪ ವೃತಧಾರಿಗಳು ಮತ್ತು ಸ್ಥಳೀಯ ಭಕ್ತಾದಿಗಳು ಭಾಗವಹಿಸಿ ಸಹಕರಿಸಿದರು.