ಡಾ.ಕೆ.ವಿ.ಚಿದಾನಂದ ದಂಪತಿ, ರಥ ಶಿಲ್ಪಿ ರಾಜಗೋಪಾಲ ಆಚಾರ್ಯ ರಿಗೆ ಅಭಿನಂದನೆ
ಬ್ರಹ್ಮರಥ ಸಮರ್ಪಣೆ ಅಪೂರ್ವವಾದುದು. ಬಂಗಾರದ ಅಕ್ಷರದಲ್ಲಿ ಬರೆದಿಡಬೇಕಾದ ದಿನ : ಒಡಿಯೂರು ಶ್ರೀ
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಡಾ.ಕೆ.ವಿ.ಚಿದಾನಂದ ಗೌಡ ಹಾಗೂ ಮನೆಯವರು ಕೊಡುಗೆಯಾಗಿ ನೀಡಿರುವ ನೂತನ ಬ್ರಹ್ಮರಥದ ಸಮರ್ಪಣೆ ಹಾಗೂ ಭೂ ಸ್ಪರ್ಶ ಕಾರ್ಯಕ್ರಮ ಜ.2ರಂದು ನಡೆಯಿತು.
ಧಾರ್ಮಿಕ ಸಭೆ : ಬ್ರಹ್ಮರಥ ಸಮರ್ಪಣೆ – ಭೂಸ್ಪರ್ಶದ ಬಳಿಕ ದೇವಸ್ಥಾನ ಮುಂಭಾಗದಲ್ಲಿ ಧಾರ್ಮಿಕ ಸಭೆ ನಡೆಯಿತು. ಒಡಿಯೂರು ಗುರುದೇವದತ್ತಾ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರು ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಬ್ರಹ್ಮರಥ ಸಮರ್ಪಣೆ ಅಪೂರ್ವವಾದುದು. ಈ ದಿನವನ್ನು ಬಂಗಾರದ ಅಕ್ಷರದಲ್ಲಿ ಬರೆದಿಡಬೇಕಾಗಿದೆ. ಇದೊಂದು ಅವಿಸ್ಮರಣೀಯ ದಿನ. ಇದಕ್ಕೆ ನಾವೆಲ್ಲರೂ ಭಾಗಿಯಾಗಿರುವುದು ನಮ್ಮ ಭಾಗ್ಯ. ಎಲ್ಲರಿಗೂ ಈ ರೀತಿಯಲ್ಲಿ ದೇವರ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ. ಅದು ಡಾ.ಚಿದಾನಂದ ಮತ್ತು ಅವರ ಮನೆಯವರಿಗೆ ಸಿಕ್ಕಿದೆ. ತನ್ನಲ್ಲಿರುವ ಸಂಪತ್ತುನ್ನು ಸಮಾಜಕ್ಕೆ ದಾನ ಮಾಡುವುದರಿಂದ ಪುಣ್ಯ ಸಂಚಯನ ಸಾಧ್ಯವಾಗುತ್ತದೆ ” ಎಂದು ಹೇಳಿದರು.
ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ದೀಪ ಬೆಳಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಡಾ.ಕುರುಂಜಿ ವೆಂಕಟ್ರಮಣ ಗೌಡರು ಸುಳ್ಯದ ಮಣ್ಣಿಗೆ ಶಕ್ತಿ ನೀಡಿದವರು. ಅವರ ಹಾದಿಯಲ್ಲೆ ಮುನ್ನಡೆಯುತ್ತಿರುವ ಡಾ. ಚಿದಾನಂದರು ದೇವರು ಕೊಟ್ಟದ್ದರಲ್ಲಿ ದೇವರಿಗೆ ಕೊಡುವ ಮೂಲಕ ಅದು ಸಮಾಜಕ್ಕೆ ಸಿಗುವಂತ ಅದ್ಬುತ ಕಾರ್ಯ ಮಾಡಿದ್ದಾರೆ. ಇದರಿಂದ ಧನ್ಯತೆಯ ಭಾವ, ನೆಮ್ಮದಿ ದೊರೆಯುತ್ತದೆ” ಎಂದು ಹೇಳಿದರು.
ರಥ ಸಮರ್ಪಣೆಯ ಪತ್ರವನ್ನು ಡಾ. ಕೆ.ವಿ.ಚಿದಾನಂದ – ಶೋಭಾ ಚಿದಾನಂದರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ ತುದಿಯಡ್ಕರಿಗೆ ಹಸ್ತಾಂತರ ಮಾಡಿದರೆ, ದೇವಸ್ಥಾನದ ಚತಿಯಿಂದ ಸ್ವೀಕೃತಿ ಪತ್ರ ಹಸ್ತಾಂತರ ಮಾಡಲಾಯಿತು.
ಅಭಿನಂಧನೆ : ಸಮಾರಂಭದಲ್ಲಿ ಡಾ.ಕೆ.ವಿ. ಚಿದಾನಂದ ಹಾಗೂ ಶೋಭಾ ಚಿದಾನಂದ ದಂಪತಿಗಳನ್ನು ಹಾಗೂ ರಥ ಶಿಲ್ಪಿ ರಾಜಗೋಪಾಲ ಆಚಾರ್ಯ ರನ್ನು ಅಭಿನಂದಿಸಲಾಯಿತು.
ಲಯನ್ಸ್ ಮಾಜಿ ರಾಜ್ಯಪಾಲ ಎಂ.ಬಿ.ಸದಾಶಿವ ಅಭಿನಂದನಾ ಭಾಷಣ ಮಾಡಿದರು.
ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು.
ಕುಂಟಾರು ರವೀಶ ತಂತ್ರಿಗಳು, ದೇವಸ್ಥಾನದ ತಂತ್ರಿಗಳಾದ ಆರೋತ್ ಪದ್ಮನಾಭ ತಂತ್ರಿಗಳು, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ,
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಎಸ್.ಅಂಗಾರ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಹಶೀಲ್ದಾರ್ ಮಂಜುಳಾ, ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ ವೇದಿಕೆಯಲ್ಲಿದ್ದರು.
ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಲಿಂಗಪ್ಪ ಗೌಡ ಕೇರ್ಪಳ, ಶ್ರೀಮತಿ ಎಂ.ಮೀನಾಕ್ಷಿ ಗೌಡ, ಎನ್.ಜಯಪ್ರಕಾಶ್ ರೈ,
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಪ್ರಧಾನ ಕಾರ್ಯದರ್ಶಿ ಗಳಾದ ಡಿ.ವಿ.ಲೀಲಾಧರ್, ಕೆ.ವಿ.ಹೇಮನಾಥ್, ಕಾರ್ಯದರ್ಶಿ ಹರೀಶ್ ಕಂಜಿಪಿಲಿ, ಡಾ.ಐಶ್ವರ್ಯ ಕೆ.ಸಿ., ಡಾ.ಗೌತಮ್ ಗೌಡ ಎ.ಜಿ. ವೇದಿಕೆಯಲ್ಲಿ ಇದ್ದರು.
ಬ್ರಹ್ಮಕಲಶೋತ್ಸವ ಸಮರ್ಪನಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಸ್ವಾಗತಿಸಿದರು. ಚಂದ್ರಶೇಖರ ಪೇರಾಲು ಅಭಿನಂದನಾ ಪತ್ರ ವಾಚಿಸಿದರು.
ಉಪನ್ಯಾಸಕಿ ಕು. ಬೇಬಿ ವಿದ್ಯಾ ಹಾಗೂ ಶ್ರೀಮತಿ ಲತಾಶ್ರೀ ಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.