ಹರಿಹರ ಪಳ್ಳತ್ತಡ್ಕದಲ್ಲಿ ನೂತನ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ

0

ಸಚಿನ್ ಕ್ರೀಡಾ ಸಂಘ ದ ಕಾರ್ಯಕ್ಕೆ ಮೆಚ್ಚುಗೆ

ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತ್ತಡ್ಕ ಹಾಗು ದಾನಿಗಳ ಸಹಕಾರದಿಂದ ನೂತನವಾಗಿ ಖರೀದಿಸಿದ ಅಂಬ್ಯುಲೆನ್ಸ್‌ನ ಲೋಕಾರ್ಪಣೆ ಕಾರ್ಯಕ್ರಮವು ಜ.2ರಂದು ಹರಿಹರ ಪಳ್ಳತಡ್ಕದಲ್ಲಿ ನಡೆಯಿತು.

ಮುಂಜಾನೆ ಅಂಬ್ಯೂಲೆನ್ಸ್ ನ್ನು ಹರಿಹರೇಶ್ವರ ದೇವಸ್ಥಾನಕ್ಕೆ ತಂದು ಅಲ್ಲಿ ಪೂಜೆ ನೆರವೇರಿಸಲಾಯಿತು. ಬಳಿಕ ಎಲ್ಲಪಡ್ಕ ಗುಳಿಗ ರಾಜನ ಕಟ್ಟೆ ಬಳಿ ತೆಂಗಿನಕಾಯಿ ಒಡೆದು ಹರಿಹರ ಪಲ್ಲತಡ್ಕದ ಪೇಟೆಯ ಸಭಾಂಗಣದ ಬಳಿ ತರಲಾಯಿತು.


ವೈದ್ಯರಾದ ಡಾ.ಚಂದ್ರಶೇಖರ ಕಿರಿಭಾಗ ದೀಪ ಬೆಳಗಿಸಿ ನೂತನ ಅಂಬ್ಯುಲೆನ್ಸ್‌ಗೆ ಚಾಲನೆ ನೀಡಿದರು.


ಸ್ಥಳೀಯರಾದ ಡಾ. ಗಿರೀಶ್ ಉರಿಮಜಲು, ಕೊಲ್ಲಮೊಗ್ರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕುಲದೀಪ, ಹರಿಹರ ಪಳ್ಳತಡ್ಕ ಗ್ರಾ.ಪಂ ಅಧ್ಯಕ್ಷ ವಿಜಯ ಅಂಙಣ, ಸಚಿನ್ ಕ್ರೀಡಾ ಸಂಘದ ಅಧ್ಯಕ್ಷ ಜಗದೀಶ್ ವಾಡ್ಯಪ್ಪನ ಮನೆ ವೇದಿಕೆಯಲ್ಲಿದ್ದರು. ನಿತ್ಯಾನಂದ ಭೀಮಗುಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮನೀಶ್ ಪಲ್ಲತಡ್ಕ ವಂದಿಸಿದರು.


ಸ್ಥಳಿಯ ಆಶಾ ಕಾರ್ಯಕರ್ತೆಯರು,ಸಿ.ಎಚ್. ಒ ರವರ,ಸಂಘದ ಸದಸ್ಯರು, ಊರಿನ ದಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಂಬ್ಯೂಲೆನ್ಸ್ ಸಂಪರ್ಕ ಸಂಖ್ಯೆ 9353074152, 7483827962