ಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಯಮುನ ಬಿ.ಎಸ್. ಅವಿರೋಧ ಆಯ್ಕೆ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಯಮುನ ಬಿ.ಎಸ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜ.2ರಂದು ನಡೆದ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಯಮುನ ಬಿ.ಎಸ್. ಅವರು ನಾಮಪತ್ರ ಸಲ್ಲಿಸಿದ್ದರು.
ಬೇರೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಇವರಿಬ್ಬರ ಆಯ್ಕೆ ಅವಿರೋಧವಾಗಿ ನಡೆಯಿತು.
ಸಹಕಾರಿ ಸಂಘದ ಈ ಹಿಂದಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ನಿರ್ದೇಶಕರಾಗಿರುವ ಮಹಮ್ಮದ್ ಕುಂಞಿ ಗೂನಡ್ಕ ಅವರು ಅಧ್ಯಕ್ಷತೆಗೆ ಸೋಮಶೇಖರ ಕೊಯಿಂಗಾಜೆ ಅವರ ಹೆಸರು ಸೂಚಿಸಿದ್ದರು. ಸಂಘದ ನಿರ್ದೇಶಕ ಕೆ.ಪಿ. ಜಾನಿ ಅವರು ಇದನ್ನು ಅನುಮೋದಿಸಿದರು.
ಉಪಾಧ್ಯಕ್ಷತೆಗೆ ಶ್ರೀಮತಿ ಯಮುನ ಬಿ.ಎಸ್. ಅವರ ಹೆಸರನ್ನು ನಿರ್ದೆಶಕ ಜಗದೀಶ್ ರೈ ಅವರು ಸೂಚಿಸಿ, ನಿರ್ದೇಶಕ ಅಬುಸಾಲಿ ಅವರು ಅನುಮೋದಿಸಿದರು.
ನೂತನ ಅಧ್ಯಕ್ಷ – ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳಿಗೆ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ಅವರು ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು. ನಿರ್ದೇಶಕ ಮಹಮ್ಮದ್ ಕುಂಞಿ ಗೂನಡ್ಕ ಅವರು ಸ್ವಾಗತಿಸಿದರು.