ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ನೂತನ ಅಂಗನವಾಡಿ ಕೇಂದ್ರಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ ಡಿ.೩೦ ರಂದು ನಡೆಯಿತು.
ಸ.ಉ.ಹಿ.ಪ್ರಾ.ಶಾಲೆ ಸೋಣಂಗೇರಿ ಇದರ ಕಟ್ಟಡದ ಹಿಂಭಾಗವಿರುವ ಖಾಲಿ ಸ್ಥಳದಲ್ಲಿ ನೂತನ ಅಂಗನವಾಡಿ ನಿರ್ಮಾಣವಾಗಲಿದ್ದು
ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ತಾ.ಪಂ. ಸಿಇಒ ರಾಜಣ್ಣ, ಪಂಚಾಯತ್ ಪಿಡಿಒ ಚೆನ್ನಪ್ಪ ನಾಯ್ಕ, ಶಿಕ್ಷಣಾಧಿಕಾರಿ ಶೀತಲ್, ಸಿಡಿಪಿಒ ಶೈಲಜಾ, ಶಾಲಾ ಮುಖ್ಯ ಶಿಕ್ಷಕಿ ಕುಸುಮಾವತಿ, ವಾರ್ಡ್ ಸದಸ್ಯ ಈಶ್ವರ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ, ಉಪಾಧ್ಯಕ್ಷೆ ಶುಭ, ಬಾಲವಿಕಾಸ ಸಮತಿ ಅಧ್ಯಕ್ಷೆ ವೇದಾವತಿ, ನಿವೃತ್ತ ಶಿಕ್ಷಕಿ ತಂಗಮ್ಮ, ಚಿನ್ನಯ ಆಚಾರಿ, ಚಿದಾನಂದ, ಮಾಜಿ ಗ್ರಾಪಂ ಅಧ್ಯಕ್ಷೆ ತಿರುಮಲೇಶ್ವರಿ ಮಕ್ಕಳ ಪೋಷಕರು, , ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಮಕ್ಕಳು ಹಾಜರಿದ್ದರು.
ಇಲ್ಲಿ ಈ ಹಿಂದೆ ಇದ್ದ ಅಂಗನವಾಡಿ ಕೇಂದ್ರವು ರಸ್ತೆ ಅಗಲೀಕರಣದ ವೇಳೆ ರಸ್ತೆಯಿಂದ ತಗ್ಗಿನಲ್ಲಿತ್ತು, ಕಳೆದ ಸಲ ಸುರಿದ ಮಳೆಗೆ ಸಂಪೂರ್ಣ ಜಲಾವೃತಗೊಂಡು ಹಾನಿಗೊಂಡಿತ್ತು.
ಈ ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರವನ್ನು ಸ.ಉ.ಹಿ.ಪ್ರಾ.ಶಾಲೆಯ ಒಂದು ಕೊಠಡಿಯಲ್ಲಿ ಈ ವರೆಗೆ ನಡೆಸಿಕೊಂಡು ಬರಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಊರಿನ ಮುಖಂಡರ ಪ್ರಯತ್ನ ಹಾಗೂ ಪೋಷಕರ ಪ್ರಯತ್ನದಿಂದ ಅಂಗನವಾಡಿ ನಿರ್ಮಾಣಕ್ಕೆ ಇಲಾಖೆಯಿಂದ ಅನುದಾನ ಮಂಜೂರುಗೊ0ಡಿದ್ದು, ಇದೀಗ ನೂತನ ಅಂಗನವಾಡಿ ಕೇಂದ್ರಕ್ಕೆ ಗುದ್ದಲಿ ಪೂಜೆ ನಡೆದಿದ್ದು ಮಕ್ಕಳ ಕಲಿಕೆಗೆ ಶಾಶ್ವತ ಕಟ್ಟಡ ನಿರ್ಮಾಣಗೊಳ್ಳಲಿದೆ.