ಸುಳ್ಯ ಖಾಸಗಿ ಬಸ್‌ನಿಲ್ದಾಣದಲ್ಲಿ ಬಾಯಿ ತೆರೆದು ನಿಂತಿರುವ ಚರಂಡಿ

0

ದುರ್ವಾಸನೆಯಿಂದ ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ

ಸುಳ್ಯ ಖಾಸಗಿ ಬಸ್ಸು ನಿಲ್ದಾಣದಲ್ಲಿ ಚರಂಡಿ ರಿಪೇರಿಗಾಗಿ ಅದರ ಸ್ಲಾಬ್ ಅನ್ನು ಕಳೆದ ಎರಡು ವಾರಗಳ ಹಿಂದೆ ತೆರೆದಿಟ್ಟಿದ್ದು ಇಂದಿಗೂ ಕೂಡ ಅದೇ ಸ್ಥಿತಿಯಲ್ಲಿ ಕಂಡುಬರುತ್ತಿದೆ.


ಇದೀಗ ಪರಿಸರ ದುರ್ನಾಥದಿಂದ ಕೂಡಿದ್ದು ಸಾರ್ವಜನಿಕರು ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಕಳೆದ ಎರಡು ವಾರಗಳ ಹಿಂದೆ ಚರಂಡಿ ಸರಿಪಡಿಸಲು ಸ್ಲಾಬ್ ಅನ್ನು ತೆಗೆಯಲಾಗಿತ್ತು. ಆದರೆ ಕೆಲಸ ಪೂರ್ಣಗೊಳಿಸದೆ ಅಲ್ಲೇ ಬಿಟ್ಟು ಹೋಗಿರುವ ಕಾರಣ ಮತ್ತು ಸ್ಥಳೀಯ ಪರಿಸರದ ಚರಂಡಿ ನೀರುಗಳು ಈ ಭಾಗದಲ್ಲಿ ಬಂದು ಶೇಖರಣೆಗೊಂಡು ಪರಿಸರ ದುರ್ನಾಥದಿಂದ ಕೂಡಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟವು ಹೆಚ್ಚಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕೆಂದು ಸಾರ್ವಜನಿಕರ ಕೋರಿಕೆಯಾಗಿದೆ.