ಕಾನತ್ತೂರು ಕಳಿಯಾಟ ಮಹೋತ್ಸವ ಸಂಪನ್ನ

0

ಸಾವಿರಾರು ಭಕ್ತಾದಿಗಳಿಂದ ಕ್ಷೇತ್ರ ದರ್ಶನ

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವರ್ಷಾವಧಿ ಕಳಿಯಾಟ ಮಹೋತ್ಸವವು ಡಿ. 27 ರಿಂದ ಜ. 1ರ ತನಕ ನಡೆಯಿತು.

ಡಿ. 24 ರಂದು ಸಂಜೆ ಶುದ್ಧಿ ಕಲಶ, ಪ್ರಾರ್ಥನೆ, ದೈವ ಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆ ನಡೆಯಿತು. ಡಿ. 28 ರಂದು ಭಂಡಾರ ಆಗಮನವಾಗಿ ಎಳೆಯೋರ್ ದೈವದ ನೇಮ ನಡೆಯಿತು.

ಡಿ. 29 ರಂದು ಬೆಳಿಗ್ಗೆ ಚಾಮುಂಡಿ ದೈವ, ಪಂಜುರ್ಲಿ ದೈವ, ಸಂಜೆ ಮೂತೋರ್ ದೈವ, ರಾತ್ರಿ ಬಂಬೇರಿಯ, ಮಾಣಿಚ್ಚಿ ದೈವದ ನೇಮ ನಡೆಯಿತು. ಡಿ. 30 ರಂದು ಬೆಳಿಗ್ಗೆ ಚಾಮುಂಡಿ ದೈವ, ಕುಂಡಕಲೆಯ ದೈವಗಳ ಸಂಚಾರ, ಪಂಜುರ್ಲಿ ದೈವ, ರಾತ್ರಿ ಪಾಷಾಣಮೂರ್ತಿ ದೈವದ ನೇಮ‌ ನಡೆಯಿತು.

ಡಿ. 31ರಂದು ಬೆಳಿಗ್ಗೆ ರಕ್ತೇಶ್ವರಿ ದೈವ, ತುಲಾಭಾರ, ಅಪರಾಹ್ನ ವಿಷ್ಣುಮೂರ್ತಿ ದೈವ, ಪ್ರೇತ ವಿಮೋಚನೆ ನಡೆಯಿತು.
ಜ. 1 ರಂದು ಬೆಳಿಗ್ಗೆ ರಕ್ತೇಶ್ವರಿ ದೈವ, ತುಲಾಭಾರ, ಅಪರಾಹ್ನ ವಿಷ್ಣುಮೂರ್ತಿ ದೈವ, ಪ್ರೇತ ವಿಮೋಚನೆ ನಡೆಯಿತು.

ಜ. 2 ರಂದು ಬೆಳಿಗ್ಗೆ ಕಳಗ ಒಪ್ಪಿಸುವುದು ನಡೆದು, ಭಂಡಾರ ನಿರ್ಗಮನವಾಗುವುದರೊಂದಿಗೆ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿತು.

ಸುಳ್ಯ , ಪುತ್ತೂರು ಭಾಗದವರು ಸೇರಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಸಾವಿರಾರು ಮಂದಿ ಭಕ್ತಾದಿಗಳು ಕಳಿಯಾಟ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ದೈವಸ್ಥಾನದ ಮೆನೇಜಿಂಗ್ ಟ್ರಸ್ಟಿ ಕೆ.ಪಿ.ಗೋಪಿನಾಥನ್ ನಾಯರ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಬಲರಾಮನ್ ನಾಯರ್ ಸಹಿತ ಆಡಳಿತ ಮಂಡಳಿಯವರು ನೇತೃತ್ವ ವಹಿಸಿದ್ದರು.