ಆಲೆಟ್ಟಿ : ವಾಲ್ಮೀಕಿ ವಸತಿ ಶಾಲೆಯಲ್ಲಿ ವಾರ್ಷಿಕೋತ್ಸವ

0

ಆಲೆಟ್ಟಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಆಲೆಟ್ಟಿ ಯಲ್ಲಿ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ. ೩ರಂದು ನಡೆಯಿತು


ಸಭಾಧ್ಯಕ್ಷತೆಯನ್ನು ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವೀಣಾ ವಸಂತ್ ವಹಿಸಿದ್ದರು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು
ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಉಮಾದೇವಿ ನೆರನೇರಿಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯ, ಪೋಷಕರಾದ ಶ್ರೀಧರ ಮಾಣಿಮರ್ದು,
ಶ್ರೀಮತಿ ಪವಿತ್ರ ಗುಂಡ್ಯ,
ಶ್ರೀಮತಿ ವೇದಾವತಿ ಕುದ್ರೆಪಾಯ, ವಿದ್ಯಾರ್ಥಿ ನಾಯಕ ಭವಿಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಪ್ರಾರ್ಥನೆ ನೆರವೇರಿತು.
ಸಹ ಶಿಕ್ಷಕಿ ಶ್ರೀಮತಿ ಅನಿತಾ ವರದಿ ವಾಚಿಸಿದರು. ಮಕ್ಕಳಿಗೆ ಶಿಕ್ಷಕರಿಗೆ ಮತ್ತು ಪೋಷಕರಿಗೆ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಹ ಶಿಕ್ಷಕಿಯರಾದ ಕುಮಾರಿ ಹೇಮಲತಾ ಮತ್ತು
ಕುಮಾರಿ ಅಕ್ಷತರವರು ವಿಜೇತರ ಪಟ್ಟಿಯನ್ನು ವಾಚಿಸಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯ ರವರು ಸ್ವಾಗತಿಸಿ ಸಹಶಿಕ್ಷಕಿ ಶ್ರೀಮತಿ ಗೀತಾ ವಂದಿಸಿದರು.
ನಂತರ ಪ್ರತಿಭಾ ಪ್ರದರ್ಶನ ನಡೆಯಿತು. ಶಿಕ್ಷಕಿ
ಶ್ರೀಮತಿ ಲತಾ ಪಿ ಆರ್ ಕಾರ್ಯಕ್ರಮ ನಿರೂಪಿಸಿದರು.