ಐವರ್ನಾಡು ಸಮಗ್ರ ಸಂಜೀವಿನಿ ಒಕ್ಕೂಟದ ಮಹಾಸಭೆ ಹಾಗೂ ವಾರ್ಷಿಕೋತ್ಸವ ಮತ್ತು ಸಂಜೀವಿನಿ ಉತ್ಪನ್ನಗಳ ಮೇಳ ಕಾರ್ಯಕ್ರಮ ಜ.02 ರಂದು ಐವರ್ನಾಡಿನಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಹಾಗೂ ಒಕ್ಕೂಟದ ಅಧ್ಯಕ್ಷೆ ಭಾರತಿ ಗುತ್ತಿಗಾರುಮೂಲೆ, ತಾಲೂಕು ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕ ಹಾಗೂ ಸುಳ್ಯ ವಲಯ ಮೇಲ್ವಿಚಾರಕರಾದ ಮಹೇಶ್ ,ಎನ್.ಆರ್.ಎಲ್.ಎಂ.ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ, ಕೌಶಲ್ಯದ ಮೇಲ್ವಿಚಾರಕರು ರೂಪ, ಬಿ ಆರ್ ಪಿ ಇ ಪಿ ಜಯಲಕ್ಷ್ಮಿ, ತಾಲೂಕು ಪಂಚಾಯತ್ ಕೃಷಿ ಜೀವನೋಪಾಯ ವ್ಯವಸ್ಥಾಪಕ ಜೀವನ ಪ್ರಕಾಶ್ ಇವರುಗಳ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ನಿವೃತ್ತಿ ಹೊಂದಿದ ಸಿಬ್ಬಂದಿ ಪುರುಷೋತ್ತಮ ಗೌಡ ಅವರಿಗೆ ಸನ್ಮಾನ ಮಾಡಲಾಯಿತು. ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡ ಮಹಿಳೆ ಭಾಗೀರಥಿ ಚೆಮ್ನೂರು, ಹೈನುಗಾರಿಕೆಯಲ್ಲಿ ರೇವತಿ ಬೋಳುಗುಡ್ಡೆ, ಉತ್ಪಾದಕರ ಸಂಘದಿಂದ ಧರ್ಮಾವತಿ , ಮಾರಾಟ ಮಳಿಗೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡ ಪುಷ್ಪಾವತಿ ಬಿರ್ಮುಕಜೆ ಇವರನ್ನು ಸನ್ಮಾನಿಸಲಾಯಿತು. ಬಳಿಕ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು. ಪದಾಧಿಕಾರಿಗಳನ್ನು, ಎನ್.ಆರ್.ಎಲ್.ಎಂ. ಸಿಬ್ಬಂದಿಗಳನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ನಂತರ ಲಕ್ಕಿ ಕೂಪನ್ ಡ್ರಾ ನಡೆಯಿತು.
ದೃತಿ ಪ್ರಾರ್ಥಿಸಿ, ಎಂಬಿಕೆ ಅಮಿತ ಸ್ವಾಗತಿಸಿ,ರೇಖಾ ವಂದಿಸಿದರು.
ಚಂಚಲಾಕ್ಷಿ ಕತ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಭೋಜನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಸಂಪಾಜೆ ಕೃಷಿ ಸಖಿ, ಪೆರುವಾಜೆ, ಕೊಡಿಯಾಲ ಎಂಬಿಕೆಯರು ಭಾಗಿಯಾಗಿದ್ದರು.