ಕೊಯನಾಡು : ಸುನ್ನಿ ಮುಸ್ಲಿಂ ಜುಮಾ ಮಸೀದಿಯ ನೂತನ ಆಡಳಿತ ಸಮಿತಿ ರಚನೆ

0

ಅಧ್ಯಕ್ಷರಾಗಿ ಹಾಜಿ ಎಸ್ ಮೊಯಿದಿನ್ ಕುಂಞಿ, ಉಪಾಧ್ಯಕ್ಷರಾಗಿ ಉಸ್ಮಾನ್ ಎಂ. ಹೆಚ್., ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಪಿ.ಎಂ.

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ವಾರ್ಷಿಕ ಮಹಾಸಭೆಯು ಜ. 10 ಜುಮಾ ನಮಾಝ್ ಬಳಿಕ ಸುಬುಲು ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ವಹಿಸಿದರು. ವರದಿ ಮತ್ತು ಲೆಕ್ಕ ಪತ್ರ ಲೆಕ್ಕ ಪತ್ರ ಮಂಡನೆಯನ್ನು ಜಮಾಅತ್ ಕಾರ್ಯದರ್ಶಿ ಹಸೈನಾರ್ ಆಮೈ ಮಂಡಿಸಿದರು. ನೂತನ ಸಮಿತಿ ರಚನೆಗೆ 11 ಮಂದಿಯನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.


ನೂತನ ಸಮಿತಿ ರಚನೆಯನ್ನು ಜ 17 ದಂದು ಜುಮಾ ನಮಾಝ್ ಬಳಿಕ ರಚಿಸಲಾಯಿತು.

ಅಧ್ಯಕ್ಷರಾಗಿ ಹಾಜಿ ಎಸ್ ಮೊಯಿದಿನ್ ಕುಂಞಿ, ಉಪಾಧ್ಯಕ್ಷರಾಗಿ ಉಸ್ಮಾನ್ ಎಂ ಹೆಚ್, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಪಿ ಎಂ, ಉಪ ಕಾರ್ಯದರ್ಶಿಯಾಗಿ ಅಶ್ರಫ್ ಬಿ ಎಂ, ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಎಸ್ ಎ, ಹಾಜಿ ಅಲವಿ ಕುಟ್ಟಿ, ಹನೀಫ್ ಎಸ್ ಪಿ, ಮುಸ್ತಾಫಾ ದೇವರಕೊಲ್ಲಿ, ಹಂಸ ತೇಕಿಲ್, ಜುಹೈಲ್ ಪಿ ಎಸ್,ಎಸ್ ಕೆ ಅಬ್ದುಲ್ ರಹಿಮಾನ್, ಸಲಹಾ ಸಮಿತಿ ಸದಸ್ಯರಾಗಿ ಅಬ್ದುಲ್ಲಾ ಕೆ ಎ, ಕುಂಞಿಲಿ, ಶಬೀರ್ ಸಾಹೇಬ್ ಆಯ್ಕೆಯಾದರು.