ಎಣ್ಮೂರು ಗ್ರಾಮದಲ್ಲಿರುವ ಕಲ್ಲೇರಿ ಇತಿಹಾಸ ಪ್ರಸಿದ್ಧ ಕಾರಣಿಕದ ಗುಳಿಗ ದೈವ ನೇಮೋತ್ಸವವು ಜ ೨೦ರಂದು ನಡೆಯಿತು. ಆರೆಂಬಿ ಸ್ಥಾನ ಚಾವಡಿಯಿಂದ ಸಂಜೆ ಶಿರಾಡಿ ರಾಜನ್ ದೈವದ ಭಂಡಾರ ಕಲ್ಲೇರಿಗೆ ಹೋಗಿ ಅಲ್ಲಿ ಕಲ್ಲೇರಿ ಗಡಿ ಜಾಗದಲ್ಲಿ ಶಿರಡಿ ರಾಜನ್ ದೈವ ಮತ್ತು ಗುಳಿಗ ದೈವಕ್ಕೆ ನೇಮೋತ್ಸವ ನಡೆಯಿತು.
ಪ್ರಸಾದ ವಿತರಣೆ ಮಹಾ ಅನ್ನಸಂತರ್ಪಣೆ ನಡೆಯಿತು. ನೇಮೋತ್ಸವದ ಬಳಿಕ ಕಲ್ಲೇರಿಯಿಂದ ಎಣ್ಮೂರು ನಿಂತಿಕಲ್‌ನವರೆಗೆ ಸಾಗಿ ಮಾರಿಕಳ ಸಮಾಪ್ತಿಯಾಯಿತು. ಶಾಸಕಿ ಭಾಗೀರಥಿ ಮುರುಳ್ಯ, ಎಣ್ಮೂರು ಗರಡಿಯ ಅನುವಂಶಿಕ ಮೊಕ್ತೇಸರ ರಾಮಕೃಷ್ಣ ಶೆಟ್ಟಿ, ಶ್ರೀಮತಿ ಪದ್ಮ ಆರ್ ಶೆಟ್ಟಿ, ಅತುಲ್ ಶೆಟ್ಟಿ ವರುಣ್ ಕುಮಾರ್ ಶೆಟ್ಟಿ, ಎಡಮಂಗಲ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರ್, ನಿಂತಿಕಲ್ ಕೆಎಸ್‌ಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಶೋಕ್ ಕುಮಾರ್ ಕೆ.ಎಸ್., ಎನ್.ಜಿ. ಲೋಕನಾಥ ರೈ, ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.