ಕೊಲ್ಲಮೊಗ್ರು ಗ್ರಾಮದ ಬಟ್ಟೋಡಿ ನಿವಾಸಿ ನಡುಮಟ್ಲು ಮನೆತನದ ದೀನಮ್ಮರವರು ಜ.19ರಾತ್ರಿ ಅಸೌಖ್ಯತೆಯಿಂದ ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಬಟ್ಟೋಡಿ, ಕೃಷಿಕರಾದ ಭುವನೇಶ್ವರ, ಮೋಹನ್ ದಾಸ್, ವಿದೇಶದಲ್ಲಿ ಉದ್ಯೋಗದಲ್ಲಿರುವ ಕುಮಾರ್, ಸುಬ್ರಹ್ಮಣ್ಯದಲ್ಲಿ ಖಾಸಗಿ ಉದ್ಯೋಗದಲ್ಲಿರುವ ಮನ್ಮಥ, ಪುತ್ರಿಯರಾದ ಶಾರದ ಪುಂಡರೀಕ ಅರಂಬೂರು, ಶ್ರೀಮತಿ ವಾಣಿ ಉಮೇಶ ಹೇವ, ಬೆಳ್ತಂಗಡಿ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.