‘ಶತ ಗಾಥೆ ‘ ಸಾಕ್ಷ್ಯ ಚಿತ್ರ ಬಿಡುಗಡೆ
ದೇವಚಳ್ಳ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವದ ಪ್ರಯುಕ್ತ ಶಾಲೆ ನಡೆದು ಬಂದ ನೂರರ ದಾರಿಯನ್ನು ನೆನಪಿಸುವ ವಿಶೇಷ ಸಾಕ್ಷ್ಯ ಚಿತ್ರ ” ಶತ ಗಾಥೆ ” ನಿರ್ಮಾಣಗೊಂಡಿದ್ದು ಕೇಪಾಳಕಜೆ ಸುಬ್ಬಪ್ಪ ಮಾಸ್ಟರ್ -ತಂಗಮ್ಮ ರಂಗಮಂದಿರದಲ್ಲಿ ಇಂದು ನಡೆದ ಶತ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊoಡಿತು.
ಮಾಜಿ ಸಚಿವ ಎಸ್. ಅಂಗಾರ ಸಾಕ್ಷ್ಯ ಚಿತ್ರ ಬಿಡುಗಡೆ ಗೊಳಿಸಿದರು.
ವಿಧಾನ ಪರಿಷತ್ ಶಾಸಕ ಬೋಜೆ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ. ವಿ. ತೀರ್ಥರಾಮ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಶತಮಾನ ಸಮಿತಿ ವತಿಯಿಂದ ಹೊರ ತರಲಾಗುವ ಈ ಸಾಕ್ಷ್ಯ ಚಿತ್ರವನ್ನು ಸುದ್ದಿ ಮೀಡಿಯಾ ಕ್ರಿಯೇಷನ್ಸ್ ನಿರ್ಮಿಸಿದೆ. ಸಾಹಿತ್ಯ ಮತ್ತು ನಿರ್ದೇಶನ ದುರ್ಗಾಕುಮಾರ್ ನಾಯರ್ ಕೆರೆ ಅವರದ್ದು. ಕೌಶಿಕ್ ರಾಮ್ ಬಳ್ಳಕ್ಕ ಸಂಕಲನ ನಿರ್ವಹಿಸಿದ್ದು ಸುಶ್ಮಿತ್ ಬೊಳ್ಳೂರು ಕ್ಯಾಮರಾ ನಿರ್ವಹಣೆ ಮಾಡಿದ್ದಾರೆ. ದಯಾನಂದ ಕೊರತ್ತೋಡಿ ಸಹಕಾರ ನೀಡಿದ್ದಾರೆ.