ಜ. 26 : ಅರಂತೋಡು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಕಾನೂನು ಅರಿವು ಕಾರ್ಯಾಗಾರ

0

ಪ್ರಜಾಧ್ವನಿ ಕರ್ನಾಟಕ ಮತ್ತು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ದ.ಕ. ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ. ೨೬. ರಂದು ವಿದ್ಯ್ಯಾರ್ಥಿಗಳಿಗೆ ಸಂವಿದಾನ ಮತ್ತು ಕಾನೂನಿನ ಅರಿವು ಕಾರ್ಯಾಗಾರವು ನೆಹರೂ ಪದವಿ ಪೂರ್ವ ಕಾಲೇಜು, ಅರಂತೊಡಿನಲ್ಲಿ ಬೆಳಿಗ್ಗೆ ೧೦:೦೦ ಗಂಟೆಗೆ ನಡೆಯಲಿರುವುದು. ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇದರ ಸಂಚಾಲಕ ಕೆ.ಆರ್. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ವಕೀಲರಾದ ದಿನೇಶ್ ಹೆಗಡೆ ಉಳಿಪಾಡಿಗುತ್ತು ‘ನಮ್ಮ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ’ ವಿಷಯದ ಬಗ್ಗೆ ಉಪನ್ಯಾಸ ನೀಡಲಿರುವರು. ಪ್ರಜಾಧ್ವನಿ ಕರ್ನಾಟಕ ಇದರ ಸಂಚಾಲಕ ಗೋಪಾಲ ಪೆರಾಜೆ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ರಮೇಶ್ ಎಸ್., ಮುಖ್ಯೋಪಾಧ್ಯಾಯರಾದ ಸೋಮಶೇಖರ ಎಚ್. ಉಪಸ್ಥಿತರಿರುವರು.