ಅಕ್ಷಯ ಕಾಂತಬೈಲುರವರಿಗೆ ಸಾಹಿತ್ಯ ಅಕಾಡೆಮಿಯ ಪುಸ್ತಕ ದತ್ತಿ ಬಹುಮಾನ

0


ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ನೀಡುವ ಪುಸ್ತಕ ದತ್ತಿ ಬಹುಮಾನಕ್ಕೆ ಅಕ್ಷಯ ಕಾಂತಬೈಲುರವರು ಆಯ್ಕೆಯಾಗಿದ್ದು, ಜ. 22 ರಂದು ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಇವರಿಂದ ದತ್ತಿ ಬಹುಮಾನ ಪಡೆದುಕೊಂಡರು.


ಅಕ್ಷಯ ಕಾಂತಬೈಲು ಅವರ 18 ರಿಂದ 28 ರ ಕವಿತಗಳು ಕೃತಿಯನ್ನು ‘ಕಾವ್ಯ -ಹಸ್ತಪ್ರತಿ’ ಪ್ರಕಾರದಲ್ಲಿ 2021 ನೇ ವರ್ಷದ ಉತ್ತಮ ಕೃತಿ ಎಂದು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಶ್ರೀನಿವಾಸ ರಾಜು ದತ್ತಿ ಬಹುಮಾನ ನೀಡಿ ಗೌರವಿಸಿದೆ.


ಅಕ್ಷಯ ಕಾಂತಬೈಲುರವರು ವಾರ್ತಾ ಭಾರತಿ, ಉದಯವಾಣಿ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಪ್ರಜಾವಾಣಿ ವೆಬ್‌ಸೈಟ್‌ನಲ್ಲಿಯೂ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಚೆಂಬು ನಿವಾಸಿಯಾಗಿದ್ದಾರೆ.