ಫೆ. 1 ಮತ್ತು ಫೆ.2 ಜಾತ್ರೋತ್ಸವ, ದೈವಗಳ ನೇಮೋತ್ಸವ
ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ ಫೆ.1 ಮತ್ತು ಫೆ..2 ರಂದು ನಡೆಯಲಿದ್ದು ಆ ಪ್ರಯುಕ್ತ ಜ.25 ರಂದು ಗೊನೆಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಬೆಳ್ಯಪ್ಪ ಗೌಡ, ಮಹಾಬಲೇಶ್ವರ ಭಟ್, ಪರಮೇಶ್ವರ ಭಟ್, ದಾಸಪ್ಪ ಗೌಡ ಅಂಜೇರಿ, ಡಿ.ಎಂ ರಾಮಣ್ಣ ಗೌಡ, ವೆಂಕಟ್ ವಳಲಂಬೆ, ಕೇಶವ ಹೊಸೋಳಿಕೆ, ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ, ಕರುಣಾಕರ ಪಾರೆಪ್ಪಾಡಿ, ಶಿವಪ್ರಕಾಶ್ ಕಡಪಳ, ಶೈಲೇಶ್ ಅಂಬೆಕಲ್ಲು, ಮಾದವ ಮೂಕಮಲೆ, ಶಾಂತಪ್ಪ ಗೌಡ ಇಜ್ಜೇಲು ಮಕ್ಕಿ, ರವಿ ವಳಲಂಬೆ, ಜಗದೀಶ್ ಪೈಕ, ಶಿವರಾಮ ದೇವ, ವರ್ಷಿತ್ ಕಡ್ತಲ್ ಕಜೆ, ದಿಗಂತ್ ಕಡ್ತಲ್ ಕಜೆ, ಶಿವಕುಮಾರ್ ಮಣಿಯಾನ ಮತ್ತಿತರರು ಉಪಸ್ಥಿತರಿದ್ದರು.
ಜಾತ್ರೋತ್ಸವ ಪ್ರಯುಕ್ತ
ಫೆ. 1ರ ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ನವ ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆಯುವುದು ಮತ್ತು ಚೆಂಡೆವಾದನ ನಡೆಯಲಿದೆ. ರಾತ್ರಿ ಮಹಾಪೂಜೆ ನಡೆದು ದೇವರ ಉತ್ಸವ ಬಲಿ ಹೊರಡುವುದು ಬಳಿಕ ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದ್ದು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಫೆ.2. ಬೆಳಿಗ್ಗಿನ ಜಾವ 5.00ಕ್ಕೆ ಉಳ್ಳಾಕ್ಲು -ಉಳ್ಳಾಲ್ತಿ ನೇಮ ನಡೆದು ಕುಮಾರ ದೈವದ ನೇಮ ನಡೆಯಲಿದೆ. ಬೆಳಗ್ಗೆ ಗಂಟೆ 8-00 ಕ್ಕೆ ಶ್ರೀ ದೇವರಿಗೆ ಪೂಜೆ ಯ ಬಳಿಕ ರಕೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆದು ಸಂಜೆ ಗಂಟೆ 5-00 ಕ್ಕೆ ಗುಳಿಗ ಕೋಲ, ಪ್ರಸಾದ ವಿತರಣೆ ನಡೆಯಲಿದೆ.