ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ಪೂಜಾರಿಮನೆ ಮಾಧವ ಗೌಡ ರವರ ಪತ್ನಿ ಶ್ರೀಮತಿ ಪ್ರೇಮಲತಾ ಪೂಜಾರಿ ಮನೆ ಯವರು ಜ.9 ರಂದು ನಿಧನರಾಗಿದ್ದು ಮೃತರ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಜ.25 ರಂದು ಪೂಜಾರಿ ಮನೆ ಮನೆಯಲ್ಲಿ ನಡೆಯಿತು.
ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಬೊಳ್ಳೂರು ರವರು ಮೃತರ ಜೀವನಗಾಥೆಯ ಕುರಿತು ಸವಿಸ್ತಾರವಾಗಿ ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕರಾದ ವಾಸುದೇವ ನಡ್ಕ ರವರು ಮಾತನಾಡಿ ಮೃತರ ಜೀವನದ ಪಕ್ಷಿ ನೋಟವನ್ನು ತಿಳಿಸುವುದರೊಂದಿಗೆ
ನುಡಿ ನಮನ ಸಲ್ಲಿಸಿದರು.
ಪುನೀತ್ ರವಿ ಕಂದ್ರಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ
ಮೃತರ ಪತಿ ಮಾಧವ ಗೌಡಪೂಜಾರಿಮನೆ,
ಪುತ್ರ ಅನಿಲ್ ಪೂಜಾರಿ ಮನೆ,ಸೊಸೆ ಶ್ರೀಮತಿ ಸನ್ನಿಧಿ ,ಪುತ್ರಿಯರಾದ
ಶ್ರೀಮತಿ ಅನಿತಾ, ಶ್ರೀಮತಿ ಅಕ್ಷತಾ,
ಶ್ರೀಮತಿ ರೇಷ್ಮ ಮತ್ತು ಅಳಿಯದಿಂದರಾದ ಶಿವಕುಮಾರ್, ಸಂದೀಪ್, ಮನೋಜ್ ಹಾಗೂ
ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವ ಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಶ್ರದ್ಧಾಂಜಲಿ ಕೋರಿದರು.