ಸುಳ್ಯದ ಸಾಹಿತಿ, ಜ್ಯೋತಿಷಿ, ಚಿತ್ರ ನಿರ್ದೇಶಕ ಮತ್ತು ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸಾಹಿತ್ಯ ರಚಿಸಿ ಹಾಡಿರುವ “ಅಲೆಮಾರಿ ಆರ್ಭಟ” ಮ್ಯೂಸಿಕ್ ಆಲ್ಬಮ್ ನ್ನು ಇತ್ತೀಚಿಗೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜರುಗಿದ ರಾಜ್ಯಮಟ್ಟದ ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ -2025 ಮಹಾ ಸಮ್ಮೇಳನದಲ್ಲಿ ಚಿತ್ರದುರ್ಗ ಛಲವಾದಿ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಬಸವನಾಗಿದೇವ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಪ್ರವರ್ಗ -1 ರ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ 46 ಜನಾಂಗಗಳ ಹೆಸರುಗಳನ್ನು ಒಳಗೊಂಡ ಸಮುದಾಯ ಗೀತೆಯಾಗಿದೆ ಈ ಹಾಡು. ಕಬಕದ ಶ್ರೀರಾಜ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ. ಎಚ್. ಭೀಮರಾವ್ ವಾಷ್ಠರ್ ಅವರ 99 ನೇಮ್ಯೂಸಿಕ್ ಆಲ್ಬಮ್ ಇದಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ, ಅಧ್ಯಕ್ಷ ಎಂ ಪ್ರಕಾಶ್, ಕಾರ್ಯದರ್ಶಿ ಪ್ರತಾಪ್, ಶ್ರೀ ತುಕಾರಾಮ ಸುರ್ವೆ, ಬಿ ಕೆ ನಾರಾಯಣ ಸ್ವಾಮಿ, ವೀರೇಶ್ ಪಾಚಂಗೆ, ಪ್ರಕಾಶ್ ಗೊಂಧಳಿ, ನಿವೃತ್ತಿನಾಥ್ ವಾಷ್ಠರ್ ಮತ್ತು ನಾಗರಾಜ್ ಗೋಗರೇ ಇನ್ನಿತರರು ಉಪಸ್ಥಿತರಿದ್ದರು.