ಕೃಷಿ ಚಟುವಟಿಕೆಯಿಂದ ಮನೆತನಕ್ಕೆ ಗೌರವ ತಂದವರು – ಜಾಕೆ ಮಾಧವ ಗೌಡ
ಸಂಸಾರದಲ್ಲಿ ಸಾಮರಸ್ಯದಿಂದ ಬದುಕಿದವರು – ಚಂದ್ರಶೇಖರ ಹೊಸೂರು
ಮುರುಳ್ಯ ಗ್ರಾಮದ ಮುರುಳ್ಯ ಮನೆತನದ ಪ್ರಗತಿಪರ ಕೃಷಿಕರಾಗಿ, ಕೊಡುಗೈದಾನಿಯಾದ ದಿ. ವಾಚಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಸುಶೀಲ ವಾಚಣ್ಣ ಗೌಡರು ಜ. 9ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಜ.25 ರಂದು ಪೆರುವಾಜೆ ಜೆ.ಡಿ.ಸಭಾಂಗಣದಲ್ಲಿ ನಡೆಯಿತು.
ಸಾಮಾಜಿಕ ಧುರೀಣರಾದ ಜಾಕೆ ಮಾಧವ ಗೌಡರವರು ಮಾತನಾಡಿ ದಿ.ಸುಶೀಲ ವಾಚಣ್ಣ ಗೌಡರವರು ಮುರುಳ್ಯ ಮನೆತನದ ಹಿರಿಯರಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಎಲ್ಲರೊಂದಿಗೆ ಬೆರೆತು ಸಾರ್ಥಕ ಜೀವನ ನಡೆಸಿದ್ದಾರೆ.ಹುಟ್ಟಿದ ಮನೆಗೆ ಬೆಳೆದ ಮನೆಗೆ ಕೀರ್ತಿಯನ್ನು ತಂದಿದ್ದಾರೆ.ಚಾಕಚಕ್ಯತೆಯ ಗುಣ ರೂಢಿಸಿಕೊಂಡವರು.ಮನೆಗೆ ಆರ್ಥಿಕ ವ್ಯವಸ್ಥೆಯನ್ನು ಕೃಷಿಯಿಂದಲೇ ವೃದ್ಧಿ ಮಾಡಿಕೊಂಡವರು ,ಪರಿಸರದವರನ್ನು ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದರು.
ಇವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವುದರ ಮುಖಾಂತರ ಇವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಎಂದು ನುಡಿನಮನ ಸಲ್ಲಿಸಿದರು.
ಅಳಿಯ ಚಂದ್ರಶೇಖರ ಹೊಸೂರು ರವರು ಮಾತನಾಡಿ ದಿ.ಸುಶೀಲರವರು ಸಂಸಾರದಲ್ಲಿ ಸಾಮರಸ್ಯದಿಂದ ಬದುಕಿದವರು ಎಲ್ಲರನ್ನು ಒಂದೇ ರೀತಿ ನೋಡಿಕೊಂಡು ಸಮಾಜಕ್ಕೆ ದಾನಿಗಳಾಗಿ ಧನ್ಯರಾಗಿದ್ದಾರೆ ಎಂದು ಹೇಳಿದರು.
ಪುತ್ರಿ ಡಾ.ಪ್ರಭಾವತಿಯವರು ಸಂಸಾರದ ದಿನಗಳ ಬಗ್ಗೆ ನೆನಪಿಸಿಕೊಂಡು ನುಡಿನಮನ ಸಲ್ಲಿಸಿದರು.
ಪುತ್ರಿ ಶ್ರೀಮತಿ ತಾರಾ ಪುಟ್ಟಪ್ಪ ರವರು ಗೀತ ನಮನ ಹೇಳಿದರು.
ಶಾಸಕಿ ಕು. ಭಾಗೀರಥಿ ಮುರುಳ್ಯ ಸೇರಿದಂತೆ ಆಗಮಿಸಿದ ಗಣ್ಯರು ದಿ.ಸುಶೀಲ ವಾಚಣ್ಣ ಗೌಡರರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಭಾಸ್ಕರ ಗೌಡ ಮುರುಳ್ಯ ದೀಪ ಪ್ರಜ್ವಲನೆ ಮಾಡಿದರು.
ಶ್ರೀಮತಿ ಸೌಮ್ಯ ಶ್ರೀ ಅನೂಪ್ ಬಿಳಿಮಲೆ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ
ಮೃತರ ಪುತ್ರಿಯರಾದ
ಶ್ರೀಮತಿ ನಳಿನಿ ಕುಶಾಲಪ್ಪ ಗೌಡ ಖಂಡಿಗಮೂಲೆ,
ಶ್ರೀಮತಿ ಚಂದ್ರಪ್ರಭ ಶಿವಪ್ಪಗೌಡ ಕುದುಪಾಜೆ,
ಶ್ರೀಮತಿ ಗಾಯತ್ರಿ ದಯಾನಂದ ಬಿಳಿಮಲೆ,
ಶ್ರೀಮತಿ ತಾರ ಪುಟ್ಟಪ್ಪ ಪೆಲತ್ತಡ್ಕ,
ಶ್ರೀಮತಿ ವನಜಾಕ್ಷಿ ಚಂದ್ರಶೇಖರ ಹೊಸೂರು,
ಶ್ರೀಮತಿ ಡಾ|| ಪ್ರಭಾವತಿ ಹನುಮಂತು ಮೈಸೂರು,
ವಿಜಯಲಕ್ಷ್ಮಿ ವಿನೋದ್ ಪೂವಪ್ಪ ದೇವಸ್ಯ ಎಡಮಂಗಲ,ಅಳಿಯಂದಿರು,
ಮೊಮ್ಮಕ್ಕಳು, ಮರಿಮಕ್ಕಳು ಕುಟುಂಬಸ್ಥರು ಉಪಸ್ಥಿತರಿದ್ದರು.