ಚೊಕ್ಕಾಡಿ ಶ್ರೀರಾಮ ದೇವಾಲಯದ ಅಧಿಕೃತ ಜಾಲತಾಣ ಅನಾವರಣ

0

ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಚೊಕ್ಕಾಡಿಯಲ್ಲಿರುವ ಶ್ರೀರಾಮ ದೇವಾಲಯದ ಅಧಿಕೃತ ಜಾಲತಾಣ www.srtchokkadi.org ಇದರ ಅನಾವರಣ ಜ.26ರಂದು ಉಪಾಸನಾ, ಚೂಂತಾರು ಮನೆಯಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ನೆರವೇರಿತು. ಜಾಲತಾಣದಲ್ಲಿ ದೇವಸ್ಥಾನದ ಮಾಹಿತಿ, ಆನ್‌ಲೈನ್ ಸಭಾಂಗಣ ಬುಕ್ಕಿಂಗ್, ದೇಣಿಗೆ ಸೇವೆಗಳನ್ನು ಕಲ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ಜಾಲತಾಣದ ವಿನ್ಯಾಸ ಹಾಗು ನಿರ್ವಹಣೆ ಮಾಡುತ್ತಿರುವ ಐಎಸ್‌ಡಿಸಿ ತಂಡದ ಮುಖ್ಯಸ್ಥರಾದ ಮಾ. ಶ್ರೀಕರರು ಜಾಲತಾಣದ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಜಾಲತಾಣ ಅನಾವರಣಗೊಳಿಸುವ ಮೊದಲು ಶ್ರೀ ರಾಮ ಸೇವಾ ಸಮಿತಿ ಚೊಕ್ಕಾಡಿ ಇದರ ಅಧ್ಯಕ್ಷರಾದ ಮಹೇಶ್ ಭಟ್ ಚೂಂತಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿಗಳಾದಕ ಉದಯಶಂಕರ ಭಟ್ ಮಿತ್ತೂರು ಹಾಗು ಮಂಡಲದ ಇತರ ಪದಾಧಿಕಾರಿಗಳು, ಶ್ರೀ ರಾಮ ಸೇವಾ ಸಮಿತಿಯ ಸದಸ್ಯರು, ಶ್ರೀ ರಾಮಚಂದ್ರಾಪುರ ಮಠದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಐಎಸ್‌ಡಿಸಿ ತಂಡದ ಸದಸ್ಯರಾದ ಮಾ. ಪ್ರದ್ಯುಮ್ನ ಪಿ, ಮಾ. ಸ್ಕಂದ ಗಣೇಶ ಪಾಲೆಚ್ಚಾರು ಹಾಗೂ ಮಠದ ಶಿಷ್ಯರು, ಶ್ರೀರಾಮ ದೇವಾಲಯದ ಭಕ್ತರು ಉಪಸ್ಥಿತರಿದ್ದರು.