ನಡೆದಾಡುವ ರಸ್ತೆಯ ಪರಿಸ್ಥಿತಿಯಂತೂ ಚಿಂತಾಜನಕ
ಸುಳ್ಯ ಜೂನಿಯರ್ ಕಾಲೇಜು ಬಳಿ ನಿರಂತರ ಕಲುಷಿತ ನೀರು ಬರುತ್ತಿದೆ ಇಲ್ಲಿಯ ಪರಿಸರದ ಜನರು ಹಳದಿ ಕೆಂಪು ಮಿಶ್ರಿತ ನೀರನ್ನು ಕುಡಿಯಲು ಯೋಗ್ಯವಲ್ಲದ ಕಾರಣ ಪರ್ಯಾಯ ವ್ಯವಸ್ಥೆಯೊಂದಿಗೆ ದಿನ ಕಳೆಯುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸಗಳಿಗೂ ಯೋಗ್ಯವಲ್ಲದ ನೀರು ನಗರಪಂಚಾಯತ್ ನಿಂದ ಸರಬರಾಜು ಆಗುತ್ತಿದೆ ನಗರ ಪಂಚಾಯತ್ ಅಧಿಕಾರಿಗಳಿಗೂ ಸಮಸ್ಯೆಯನ್ನು ತಿಳಿಸಿ ಯಾವುದೇ ಪ್ರಯೋಜವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.ನೀರಿನ ಪೈಪ್ ದುರಸ್ಥಿಮಾಡುವರಲ್ಲಿ ವಿಷಯ ತಿಳಿಸಿದರೂ ಯಾವುದೇ ಸ್ಪಂದನೆ ಇಲ್ಲದಂತಾಗಿದೆ ಅದೇ ಪರಿಸರದಲ್ಲಿ ಇಂಜಿನಿಯರ್ ಪ್ರಸನ್ನ ಅವರ ಮನೆಯ ಬಳಿಯಿಂದ ಮಹಾಲಿಂಗ ಪಾಟಳಿಯವರ ಮನೆಯರೆಗೆ ಇರುವ ರಸ್ತೆ ಸಾರ್ವಜನಿಕರಿಗೆ ನಡೆದಾಡಲು ಯೋಗ್ಯವಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ ರಸ್ತೆ ಯಾವುದೋ ಗುಂಡಿಯಾವುದೋ ಎಂದು ತಿಳಿಯಲು ಸಾದ್ಯವಿಲ್ಲ 200 ಮೀಟರ್ ಉದ್ದದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಇನ್ನಷ್ಟು ವರ್ಷ ಕಾಯಬೇಕೆಂದು ಇಲ್ಲಿನ ಪರಿಸರದ ನಿವಾಸಿಗಳಿಗೆ ಉತ್ತರ ಸಿಗದ ಪ್ರಶ್ನೆಯಾಗಿದೆ.
ಅದೇ ರಸ್ತೆಯ ನಗರ ಪಂಚಾಯತ್ ದಾರಿ ದೀಪ ಉರಿಯದೆ ತಿಂಗಳಾಗಿದೆ.
ಒಟ್ಟಿನಲ್ಲಿ ಈ ಪರಿಸರ ನಗರ ಪಂಚಾಯತ್ ಗೆ ಸಂಬಂಧಿಸಿದ ಪ್ರದೇಶದಂತಾಗಿದೆ ಒಟ್ಟಾರೆ ಈ ಪರಿಸರದ ಜನರ ಸಮಸ್ಯೆಗೆ ಸ್ಪಂದಿಸುವವರು ಯಾರು ಎಂಬ ಪ್ರಶ್ನೆ ಮೂಡುತ್ತಿದೆ ಒಟ್ಟಿನಲ್ಲಿ ಈ ಪ್ರದೇಶದ ಜನರ ಸಮಸ್ಯೆಗೆ ಯಾವಗ ಪರಿಹಾರ ಸಿಗುತ್ತದೆ ಎಂದು ಕಾದು ನೋಡಬೇಕಾಗಿದೆ.