ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ವತಿಯಿಂದ ಜ. 26ರಂದು ನೆಟ್ಟಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಸಂತ ನೆಟ್ಟಾರು ಧ್ವಜ ವಂದನೆ ಕಾರ್ಯಕ್ರಮವನ್ನು ನಡೆಸಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಉಷಾ ಬಿ. ಬಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ನಳಿನಾಕ್ಷಿ, ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲಯನ್ ಚೇತನ್ ಡಿ. ಶೆಟ್ಟಿ ಹಾಗೂ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಅಕ್ಷಯ ಯುವಕ ಹಾಗೂ ಯುವತಿ ಮಂಡಲದ ಸದಸ್ಯರು, ಊರವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸಿಹಿ ತಿಂಡಿ, ಉಪಹಾರ ವಿತರಿಸಲಾಯಿತು. ಕ್ಲಬ್‌ನ ಸದಸ್ಯರಾದ ಲ. ಹೊನ್ನಪ್ಪ ಬೆಳ್ಳಾರೆ, ಲ. ಯಶಸ್ವಿನಿ, ಲ. ತಿಮ್ಮಪ್ಪ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.