ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ
ಸಂಘದ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಸುಸೂತ್ರವಾಗಿ ನೆರವೇರಿಸಿಕೊಟ್ಟ ಚುನಾವಣಾಧಿಕಾರಿ ವಿಲಾಸ್ ರವರನ್ನು ಸೊಸೈಟಿ ಆಡಳಿತ ಮಂಡಳಿಯ
ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಚುನಾವಣಾಧಿಕಾರಿ ವಿಲಾಸ್ ರವರು ನಿವೃತ್ತ ಯೋಧರಾಗಿದ್ದು ಅವರ ಕಾರ್ಯ ವೈಖರಿಯನ್ನು ಮೆಚ್ಚಿ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಅಭಿನಂದಿಸಿದರು. ಸಿ.ಇ.ಒ ದಿನಕರರವರು ಸ್ವಾಗತಿಸಿದರು. ಸಿಬ್ಬಂದಿ ಪ್ರವೀಣ್ ಆಲೆಟ್ಟಿ ವಂದಿಸಿದರು.