ಮುಂಜಾನೆ ಶ್ರೀ ರುದ್ರ ಹವನ , ಆಶ್ಲೇಷ ಬಲಿ ಸೇರಿದಂತೆ ವಿವಿಧ ವೈಧಿಕ ಕಾರ್ಯಕ್ರಮಗಳು
ರಾತ್ರಿ ಧ್ವಜಾರೋಹಣ
ಸಂಜೆ ನೃತ್ಯಾರ್ಪಣ, ನೃತ್ಯ ಸಂಭ್ರಮ ಮತ್ತು ಯಕ್ಷಗಾನ ಬಯಲಾಟ
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ನಡೆಯಲಿದೆ.
ಫೆ.1 ರಂದು ದೇಗುಲದಲ್ಲಿ 7.30ರಿಂದ ಶ್ರೀ ಗಣಪತಿ ಹವನ ,ಶ್ರೀ ರುದ್ರ ಹವನ ಮತ್ತು ವೇದಪಾರಾಯಣ ಆರಂಭ, ಪೂರ್ವಾಹ್ನ 10.30ರಿಂದ ಗರಡಿ ಬೈಲ್ ಮೂಲ ನಾಗನ ಕಟ್ಟೆಯಲ್ಲಿ ಆಶ್ಲೇಷ ಬಲಿ ಪೂಜೆ ಮತ್ತು ನಾಗ ತಂಬಿಲ ಸೇವೆ ನಡೆಯಲಿದೆ.



ಸಂಜೆ 6ಕ್ಕೆ ಕ್ಷೇತ್ರ ತಂತ್ರಿಗಳ ಆಗಮನ
ಸಂಜೆ 7 ರಿಂದ ಧ್ವಜಾರೋಹಣ
ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು :
ಸಂಜೆ 6 ರಿಂದ 7ರ ವರೆಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ವಿಶ್ವಮೋಹನ ನೃತ್ಯ ಕಲಾ ಶಾಲೆ ಕಡಬ ಇವರಿಂದ ವಿದುಷಿ ಮಾನಸ ಪುನೀತ್ ರೈ ನಿರ್ದೇಶನದ ‘ನೃತ್ಯಾರ್ಪಣ’. ಬಳಿಕ
ಡ್ಯಾನ್ಸ್ ಆಂಡ್ ಬೀಟ್ಸ್ ಪಂಜ, ಬೆಳ್ಳಾರೆ, ಕೈಕಂಬ ಹಾಗೂ ಸುಬ್ರಹ್ಮಣ್ಯ ಶಾಖೆಯ ವಿದ್ಯಾರ್ಥಿಗಳಿಂದ ಜೀವನ್ ಬೆಳ್ಳಾರೆ ನಿರ್ದೇಶನದ ‘ನೃತ್ಯ ಸಂಭ್ರಮ’
ಧ್ವಜಾರೋಹಣದ ನಂತರ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮಂಗಳೂರು ಇವರಿಂದ ರಥಬೀದಿಯಲ್ಲಿ ಯಕ್ಷಗಾನ ಬಯಲಾಟ ಪ್ರಸಂಗ ‘ರಂಗಪ್ರವೇಶ’
ಪ್ರದರ್ಶನ ಗೊಳ್ಳಲಿದೆ.