ಶ್ರೀ ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ
ಆಕರ್ಷಣೆಯಾದ ರೆಂಜಾಳ ಬೆಡಿ

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗೊಳಪಟ್ಟ ರೆಂಜಾಳ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಬಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ. 31 ರಂದು ನಡೆಯಿತು.
ನಿನ್ನೆ ಬೆಳಿಗ್ಗೆ ಗಣಪತಿ ಹೋಮದ ಬಳಿಕ ಬಿಂಬ ಶುದ್ಧಿ, ಕಲಶ ಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ ನಡೆದು ಸಾನಿಧ್ಯ ಕಲಶ ಪೂಜೆ ಹಾಗೂ ಸಾನ್ನಿಧ್ಯ ಕಲಶಾಭಿಷೇಕ ನಡೆಯಿತು.
ರಾತ್ರಿ ಪೂಜೆ ಬಳಿಕ ಭೂತಬಲಿ, ಸೇವಾಬಲಿಗಳು, ನೃತ್ಯ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮತ್ತು ಸಂಪ್ರೋಕ್ಷಣೆ ಹಾಗೂ ಮಂತ್ರಾಕ್ಷತೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಸುಳ್ಯದ ಬಾಲಕೃಷ್ಣ ಮತ್ತು ತಂಡದವರಿಂದ ಭಜನಾಮೃತ ಕಾರ್ಯಕ್ರಮ ನಡೆಯಿತು. ನಂತರ ಊರಿನ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ನಂತರ ಸಂತೋಷ್ ಮುಂಡೋಕಜೆ ನೇತೃತ್ವದಲ್ಲಿ ಸುಳ್ಯ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ನಡೆಯಿತು.
ಸಿಡಿ ಮದ್ದು ಪ್ರದರ್ಶನ : ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರ ವಸಂತ ಕಟ್ಟೆ ಪೂಜೆಯ ಸಂದರ್ಭ ಆಕರ್ಷಣೆಯ ಸಿಡಿಮದ್ದು ಪ್ರದರ್ಶನ (ರೆಂಜಾಳ ಬೆಡಿ) ನಡೆಯಿತು.