ಅಜ್ಜಾವರ: ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ರೂ.50,000 ಧನಸಹಾಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ನೇತೃತ್ವದಲ್ಲಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಆಡಳಿತ ಸಮಿತಿಯವರಿಗೆ ಡಿ.ಡಿ ಮುಖಾಂತರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನೆಯ ವಲಯಮೇಲ್ವಿಚಾರಕರಾದ ಶ್ರೀಮತಿ ಕಾಂತೀಕಮಣಿ, ಯೋಜನೆಯ ಗ್ರಾಮ ಅಧ್ಯಕ್ಷರಾದ ಸೀತಾರಾಮ, ಯುವ ಮುಂದಾಳು ಮಹೇಶ್ ರೈ ಮೇನಾಲ, ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ನಾಚಿ ಮುತ್ತು, ಉಪಾಧ್ಯಕ್ಷರಾದ ವಿಜಯ್, ಖಜಾಂಚಿ ಮಿಥುನ್, ಗೌರವಧ್ಯಕ್ಷರಾದ ದಯಾಳ್, ದೇವಸ್ಥಾನದ ಅರ್ಚಕರಾದ ಯೋಗರಾಜ್, ಶ್ರೀ ರಾಮ ಭಜನಾ ಮಂದಿರ ಅಧ್ಯಕ್ಷರಾದ ಪೊನ್ನುದೊರೆ, ಸಮಿತಿ ಸದಸ್ಯರಾದ ಶ್ರೀಮತಿ ಶಿವಪಾಕ್ಯಂ ಉಪಸ್ಥಿತರಿದ್ದರು, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು, ಧನ್ಯವಾದ ಸಮರ್ಪಿಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.