ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ – ವೈಭವದ ಹಸಿರುವಾಣಿ ಮೆರವಣಿಗೆ

0

ಫೆ.10 ರಂದು ದೈವಗಳ ಭಂಡಾರ ಬರುವುದು, ದರ್ಶನ ಬಲಿ ,ಬಟ್ಟಲು ಕಾಣಿಕೆ

ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.8 ರಂದು ಉಗ್ರಾಣ ಮುಹೂರ್ತದೊಂದಿಗೆ ಪ್ರಾರಂಭಗೊಂಡಿದ್ದು ಫೆ.10 ರ ವರೆಗೆ ನಡೆಯಲಿದೆ.
ಫೆ.08 ರಂದು ಪೂರ್ವಾಹ್ನ ವೈಭವದ ಮೆರವಣಿಗೆಯೊಂದಿಗೆ ಹಸಿರುವಾಣಿ ಸಮರ್ಪಣೆ ನಡೆಯಿತು.
ಐವರ್ನಾಡು ಪೇಟೆಯಿಂದ ದೇವಸ್ಥಾನಕ್ಕೆ ವಾಹನಗಳ ಮೂಲಕ ವೈಭವದ ಮೆರವಣಿಗೆಯೊಂದಿಗೆ ಹಸಿರುವಾಣಿ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಹಾಗೂ ಸದಸ್ಯರು ಮತ್ತು ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಉಗ್ರಾಣ ತುಂಬಿಸಲಾಯಿತು.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.


ರಾತ್ರಿ ಗಂಟೆ 7.30 ರಿಂದ ರಂಗಪೂಜೆಗಳು ನಡೆಯಲಿದೆ.
ಫೆ.09 ರಂದು ಬೆಳಿಗ್ಗೆ ಗಂಟೆ 9.00 ರಿಂದ ಶತರುದ್ರಾಭಿಷೇಕ,ಅಶ್ವಥನಾರಾಯಣ ಪೂಜೆ,108 ಕಾಯಿ ಗಣಪತಿ ಹೋಮ ನಡೆಯಲಿದೆ.
11.30 ಕ್ಕೆ ಕಲಶಾಭಿಷೇಕಗಳು,ಗಂಟೆ 12.30 ರಿಂದ ಮಹಾಪೂಜೆ,ಪ್ರಸಾದ ವಿತರಣೆ,ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 6.00 ರಿಂದ ಶ್ರೀ ವಿಷ್ಣುನಾಮ ಪಾರಾಯಣ ಮತ್ತು ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ.


ರಾತ್ರಿ ಗಂಟೆ 7.00 ರಿಂರ ಶ್ರೀ ದೇವರ ಬಲಿ ಹೊರಟು ಉತ್ಸವ,ವಸಂತ ಕಟ್ಟೆ ಪೂಜೆ ನಡೆಯಲಿದೆ.
ಫೆ.10 ರಂದು ಪೂರ್ವಾಹ್ನ ಗಂಟೆ 8.30 ಕ್ಕೆ ಕೊಯಿಲ ಉಳ್ಳಾಕುಲು ದೈವಗಳ ಭಂಡಾರ ಬರುವುದು ಗಂಟೆ 9.30 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ,ಶುದ್ಧಿ ಕಲಶ ನಡೆಯಲಿದೆ.
ಗಂಟೆ 12.30 ಕ್ಕೆ ಮಹಾಪೂಜೆ,ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10.00 ರಿಂದ ದೈವಗಳ ನಡಾವಳಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಫೆ.08 ರಂದು ರಾತ್ರಿ ಗಂಟೆ 7.30 ರಿಂದ ಅಂಗನವಾಡಿ ಕೇಂದ್ರ ಮತ್ತು ದೇರಾಜೆ ಶಾಲಾ ಮಕ್ಕಳು “ಬಾಲಗೋಕುಲ” ಮಕ್ಕಳಿಂದ ಹಾಗೂ ಶ್ರೀ ಗುರುದೇವ ಭಜನಾ ಮಂಡಳಿ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 9.00 ರಿಂದ ಗೆಳೆಯರ ಬಳಗ ದೇರಾಜೆ ಐವರ್ನಾಡು ಇವರ ಪ್ರಾಯೋಜಕತ್ವದಲ್ಲಿ “ನೃತ್ಯ ಸಂಭ್ರಮ” ಪ್ರಸ್ತುತಿ ಕಲಾ ಮಂದಿರ ಬೆಳ್ಳಾರೆ ಇವರಿಂದ.
ಫೆ.09 ರಂದು ಬೆಳಿಗ್ಗೆ 9.30 ರಿಂದ ಶ್ರೀ ಗುರುದೇವ ಭಜನಾ ಮಂಡಳಿ ಐವರ್ನಾಡು ಮತ್ತು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಐವರ್ನಾಡು ಇವರಿಂದ ಭಜನೆ ನಡೆಯಲಿದೆ.


ಗಂಟೆ 11.30 ರಿಂದ ಒಂ ಶಕ್ತಿ ಭಕ್ತಿ ಗಾನ ಲಹರಿ ನಡೆಯಲಿದೆ.
ಒಂ ಶಕ್ತಿ ಸ್ವರ ಸಂಗಮ – ಕೃಷ್ಣವೇಣಿ ಐವರ್ನಾಡು ಇವರಿಂದ.
ರಾತ್ರಿ ಗಂಟೆ 6.00 ರಿಂದ “ಯೋಗ ನೃತ್ಯ ಸಂಗಮ” ಸುಳ್ಯ ಹಾರ್ದಿಕ್ ಮತ್ತು ತಂಡದವರಿಂದ ರಾತ್ರಿ ಗಂಟೆ 9.30 ರಿಂದ ಶ್ರೀ ಪಂಚಲಿಂಗೇಶ್ವರ ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಇದರ ಆಶ್ರಯದಲ್ಲಿ “ನೃತ್ಯ ವೈವಿಧ್ಯ ಕಾರ್ಯಕ್ರಮ “ನಡೆಯಲಿದೆ.
ಫೆ.10 ರಂದು ರಾತ್ರಿ ಗಂಟೆ 7.00 ರಿಂದ ಪಂಚಲಿಂಗೇಶ್ವರ ಯಕ್ಷಕಲಾ ಕೇಂದ್ರ ಐವರ್ನಾಡು ಇವರಿಂದ ಮಕ್ಕಳ ಯಕ್ಷಗಾನ “ಶಿವ ಪಂಚಾಕ್ಷರಿ ಮಹಿಮೆ” ನಡೆಯಲಿದೆ.