ಶೀತಲ್ ಕಲೆಕ್ಷನ್ ಇಪ್ಪತ್ತರ ಸಂಭ್ರಮ ನೂತನ ಲೋಗೋ ಅನಾವರಣ

0

ಇಪ್ಪತ್ತು ವರ್ಷಗಳ ಹಿಂದೆ ಸಹಕರಿಸಿದ ಅತಿಥಿಗಳಿಗೆ ಹಾಗೂ ಗ್ರಾಹಕರಿಗೆ ಗೌರವರ್ಪಣೆ

ಶೀತಲ್ ವಿಶ್ವಾಸಾರ್ಹ ಸೇವೆಗೆ ಮಾದರಿ: ಎನ್ ಎ ರಾಮಚಂದ್ರ


ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಹೆಸರಾಂತ ವಸ್ತ್ರ ಮಳಿಗೆ ಶೀತಲ್ ಕಲೆಕ್ಷನ್ ಗೆ ಇಪ್ಪತ್ತರ ಸಂಭ್ರಮ.
ಈ ಸಲುವಾಗಿ ಇಪ್ಪತ್ತು ವರ್ಷಗಳ ಹಿಂದೆ ಮಳಿಗೆ ಉದ್ಘಾಟಿಸಿದ ಮಾಜಿ ನಗರ ಪಂಚಾಯತ್ ಅಧ್ಯಕ್ಷ ಎನ್ ಎ ರಾಮಚಂದ್ರ ಹಾಗೂ ಗ್ರಾಹಕರಿಯೂ ಹಿತೈಷಿಗಳಾಗಿಯು ಸಹಕರಿಸಿ ಹಿರಿಯ ಉದ್ಯಮಿ ಕೃಷಿಕ ಪಳ್ಳಿಕುಂಞಿ ಹಾಜಿಯವರನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಸಂಸ್ಥೆಯ ನೂತನ ಲೋಗೋವನ್ನು ಅನಾವರಣಸಲಾಯಿತು. ಗ್ರಾಹಕರಿಗೆ ಅದೃಷ್ಟ ಚಿಟಿ ಯೋಜನೆಯನ್ನು ವಿಶೇಷ ರಿಯಾಯಿತಿ ಕೊಡುಗೆಯ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಎಸ್ ಸಂಶುದ್ದೀನ್, ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ, ಮಾಜಿ ಅಧ್ಯಕ್ಷ ಎಂ ಬಿ ಸದಾಶಿವ, ನಗರ ಸದಸ್ಯರಾದ ಉಮ್ಮರ್ ಕೆ ಎಸ್, ಮಾಜಿ ಸದಸ್ಯ ಮುಸ್ತಫಾ ಕೆ ಎಂ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಉದ್ಯಮಿ ಲತೀಫ್ ಹರ್ಲಡ್ಕ, ಹಮೀದ್ ಸಮ್ಮರ್‌ ಕೂಲ್, ಅಬ್ದುಲ್ಲಾ ಹಾಜಿ ಜಯನಗರ, ಹಾಜಿ ಕಲಾಂ ಕಟ್ಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರ ಅಳಿಯ ಪ್ರೊಫೆಸರ್ ಶಾಫಿ ಸ್ವಾಗತಿಸಿ,
ಪತ್ರಕರ್ತ ಶರೀಫ್ ಜಟ್ಟಿಪಳ್ಳ , ತಸ್ನಿಮ್ ಕಾರ್ಯಕ್ರಮ ನಿರೂಪಿಸಿದರು.