ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ 45 ನೇ ವರ್ಷದ ಏಕಾಹ ಭಜನೆಯು ಫೆ. 12 ರಂದು ನಡೆಯಿತು.




ಸೂರ್ಯೋದಯಕ್ಕೆ ದೀಪ ಸ್ಥಾಪನೆಯಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ತಾಲೂಕಿನ ವಿವಿಧ ಭಜನಾ ಸಂತ ಮಂಡಳಿಯ ಸದಸ್ಯರಿಂದ ನಿರಂತರ 24 ಗಂಟೆಗಳ ಕಾಲ ಭಜನಾ ಸಂಕೀರ್ತನೆಯು ನಡೆಯಿತು.
ಮರುದಿನ ಪ್ರಾತ:ಕಾಲ ಮಂಗಳಾಚರಣೆಯಾಗಿ ದೀಪ ವಿಸರ್ಜನೆಯೊಂದಿಗೆ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು. ಭಜನಾ ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದರು.