ನಿಂತಿಕಲ್ಲು- ಪಡ್ಪಿನಂಗಡಿ ಪರಿಸರದಲ್ಲಿ ಹುಚ್ಚುನಾಯಿ ಕಾಟದ ಭಯದಲ್ಲಿ ಶಾಲಾಮಕ್ಕಳು ಹಾಗೂ ಸಾರ್ವಜನಿಕರು

0

ಕಳೆದ ಕೆಲವು ದಿನಗಳಿಂದ ನಿಂತಿಕಲ್ಲು ಸಮೀಪದ ಪಡ್ಪಿನಂಗಡಿ ಪರಿಸರದಲ್ಲಿ ಹುಚ್ಚು ನಾಯಿಯೊಂದು ಕೆಲವು ಬೀದಿನಾಯಿಗಳಿಗೆ ಕಚ್ಚಿದನ್ನು ಸಾರ್ವಜನಿಕರು ಗಮನಿಸಿರುತ್ತಾರೆ. ಮತ್ತೆ ಅದೇ ಹುಚ್ಚು ನಾಯಿ ಪಡ್ಪಿನಂಗಡಿ ಭಾಗದಲ್ಲಿ ತಿರುಗಾಡುತ್ತಿದ್ದು, ಇತರ ನಾಯಿಗಳಿಗೆ ಕಚ್ಚಿರುವ ಸಾಧ್ಯತೆ ಕೂಡಾ ಇರುತ್ತದೆ.

ಪಡ್ಪಿನಂಗಡಿಯ ಈ ಪರಿಸರದಲ್ಲಿ ಸರಕಾರಿ ಶಾಲೆ, ಹಾಲಿನ ಡೈರಿ, ಗ್ರಾಮ ಪಂಚಾಯತ್ ಕಛೇರಿ, ಸಹಕಾರಿ ಸಂಘ… ಇತ್ಯಾದಿ ಕಛೇರಿಗಳಿದ್ದು ಈ ಪರಿಸರದ ಬೀದಿಯಲ್ಲಿ ಸುಮಾರು 15-20 ಬೀದಿ ನಾಯಿಗಳು ತಿರುಗಾಡುತ್ತಿರುತ್ತದೆ. ಇಲ್ಲಿನ
ಶಾಲಾಮಕ್ಕಳು, ಡೈರಿಗೆ ಹಾಲು ಹಾಕುವ ರೈತರು ಹಾಗೂ ಸಾರ್ವಜನಿಕರು ಬೀದಿ ನಾಯಿಗಳ ಕಾಟವನ್ನು ದಿನನಿತ್ಯ ಎದುರಿಸುವಂತಾಗಿದೆ. ಬಹಳ ಮುಖ್ಯವಾಗಿ ಶಾಲಾ ಮಕ್ಕಳು ಓಡಾಟ ಇರುವ ಈ ಪರಿಸರದಲ್ಲಿ ಬೀದಿ ನಾಯಿಗಳ ಭಯದಿಂದ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಆದುದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಬೀದಿ ನಾಯಿಗಳಿಗೆ ರೋಗ ನಿರೋಧಕ ಲಸಿಕೆಯನ್ನು ನೀಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಮುಚ್ಚಿಲ ಬ್ರಾಂಚ್ ಸಮಿತಿಯ ಅಧ್ಯಕ್ಷರಾದ ಝುಬೈರ್ ರವರು ಆಗ್ರಹಿಸಿದ್ದಾರೆ.