ಸವಿತಾ ಸಮಾಜದ ಮಹಾಸಭೆ

0

ನೂತನ ಅಧ್ಯಕ್ಷರಾಗಿ ಉದಯ ಜಟ್ಟಿಪಳ್ಳ, ಕಾರ್ಯದರ್ಶಿ ನವೀನ್ ಸೂಂತೋಡು, ಖಜಾಂಚಿ ಪ್ರಸನ್ನ ಪಂಜ ಆಯ್ಕೆ

ಸುಳ್ಯ ತಾಲೂಕು ಸವಿತಾ ಸಮಾಜದ ಮಹಾಸಭೆ ಫೆ.4 ರಂದು ನಡೆದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಉದಯ ಜಟ್ಟಿಪಳ್ಳ, ಕಾರ್ಯದರ್ಶಿಯಾಗಿ ನವೀನ್ ಸೂಂತೋಡು ಹಾಗೂ ಖಜಾಂಚಿಯಾಗಿ ಪ್ರಸನ್ನ ಪಂಜ ಆಯ್ಕೆಯಾದರು.

ಸವಿತಾ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಅಜ್ಜಾವರ ರವರ ಅಧ್ಯಕ್ಷತೆಯಲ್ಲಿ ಟಿ.ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಕಾರ್ಯದರ್ಶಿ ಜಯಪ್ರಕಾಶ್ ಮಂಡೆಕೋಲು ವರದಿ ಮಂಡಿಸಿದರು. ಅಧ್ಯಕ್ಷರು ಲೆಕ್ಕ ಪತ್ರ ಮಂಡಿಸಿದರು. ಚರ್ಚೆಯ ಬಳಿಕ ಈ ವರದಿಗಳನ್ನು ಸ್ವೀಕರಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆಯ ವಿಚಾರ ಚರ್ಚೆಯಾದಾಗ ಈ ಸಭೆಯಲ್ಲಿ ನೂತನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಯವರನ್ನು ಆರಿಸುವುದೆಂದೂ, ಅವರು ತಿಂಗಳೊಳಗೆ ಸಭೆ ಕರೆದು ಹತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬೇಕೆಂದೂ, ಜತೆಗೆ ಮಹಿಳಾ ಸಮಿತಿ ಹಾಗೂ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅದೇ ಸಭೆಯಲ್ಲಿ ಆರಿಸಬೇಕೆಂದೂ ನಿರ್ಧರಿಸಲಾಯಿತು.