
ಎಡಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಅಂಗವಾಗಿ ಫೆ.12 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ
ತಂತ್ರಿಗಳ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು.

ಶ್ರೀರಂಗ ಪೂಜೆ, ಬಲಿಹೊರಟು ಉತ್ಸವ, ನಡೆದು ಪ್ರಸಾದ ವಿತರಣೆ ನಡೆಯಿತು.




ಬಳಿಕ ಅಂಗನವಾಡಿ ಮಕ್ಕಳು, ಪ್ರೈಮರಿ ಮಕ್ಕಳು ಹೈಸ್ಕೂಲ್ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಫೆ 13 ರಂದು ರಾತ್ರಿ ಸಂಜೆಯ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ಮತ್ತು ತರವಾಡು ಮಾಲೆಂಗ್ರಿ ಪಿಲಿಕುಂಜ ಸ್ಥಾನದಿಂದ ಶ್ರೀ ಮಾಲಿಂಗರಾಯ ದೈವದ ಭಂಡಾರ ಬಂದು ಓಲೆ ಸವಾರಿ, ಹೊಸ ಮಜಲು ಕಟ್ಟೆ ಪೂಜೆ, ಮಹಾ ಪೂಜೆ ಪ್ರಸಾದ ವಿತರಣೆ, ರಾತ್ರಿ ನೆಲ್ಯಾರು ನೇಮ, ಹಾಗೂ ಉಳ್ಳಾಲ್ತಿ ನೇಮ ನಡೆಯಲಿರುವುದು ಹಾಗೂ ನಾಕೂರು ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪಾಪಣ್ಣ ವಿಜಯ ಎಂಬ ಯಕ್ಷಗಾನ ಬಯಲಾಟ ನಡೆಯಲಿರುವುದು.
