ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ವರ್ಷಾವಧಿ ಜಾತ್ರೋತ್ಸವ ಪ್ರಾರಂಭ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಸನ್ನಿಧಿಯಲ್ಲಿ ಸಂಪ್ರದಾಯದಂತೆ ನಡೆಯುವ ಶ್ರೀ ಸುಬ್ರಹ್ಮಣ್ಯ ದೇವರ ಮತ್ತು ರಕ್ತೇಶ್ವರಿ, ವನಶಾಸ್ತಾವು, ನಾಗದೇವರು, ಪರಿವಾರ ದೈವಗಳ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವವು ಫೆ.18ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆಯೊಂದಿಗೆ ಪ್ರಾರಂಭಗೊಂಡಿತು.

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರ, ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರ, ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರ, ಪೈಚಾರು, ಬೊಳುಬೈಲು, ಅಡ್ಕಾರು , ಶ್ರೀ ರಾಮ ಭಜನಾ ಮಂದಿರ ಪೇರಾಲು – ಅಂಬ್ರೋಟಿಯಿಂದ ಭಕ್ತಾದಿಗಳು ಸಮರ್ಪಿಸಿದ ಹಸಿರುವಾಣಿ ಮೆರವಣಿಗೆಯು ವಿವಿಧ ವಾಹನಗಳ ಮೂಲಕ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಸಾಗಿ ಬಂದು ಸಮರ್ಪಣೆಗೊಂಡು, ಬಳಿಕ ಉಗ್ರಾಣ ತುಂಬಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ದೇವಾಲಯದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ರೈ ಕುಕ್ಕಂದೂರು, ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಪುರುಷೋತ್ತಮ ಗೌಡ ನಂಗಾರು, ವಿನೋದ್ ಕುಮಾರ್ ಮಹಾಬಲಡ್ಕ, ಹೇಮಚಂದ್ರ ಕುತ್ಯಾಳ, ವಿಜಯಕುಮಾರ್ ನರಿಯೂರು, ಅರ್ಚಕರಾದ ಶ್ರೀವರ ಪಾಂಗಣ್ಣಾಯ, ಶ್ರೀಮತಿ ಸೌಮ್ಯಲಕ್ಷ್ಮಿ ಬೈತಡ್ಕ, ಶ್ರೀಮತಿ ಪವಿತ್ರಭಾರತಿ ಕೋನಡ್ಕಪದವು, ಶ್ರೀಮತಿ ಸುಮತಿ ಹುಲಿಮನೆ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಆತ್ಮಾನಂದ ಗಬ್ಬಲಡ್ಕ, ಗೋಪಾಲ ವಿ. ಪದವು, ಹರೀಶ್ ಕುಕ್ಕುಡೇಲು, ಬಾಲಕೃಷ್ಣ ಮಣಿಯಾಣಿ ಮರಸಂಕ, ಉತ್ಸವ ಸಮಿತಿ ಕೋಶಾಧ್ಯಕ್ಷ ವಿಜಯಕುಮಾರ್ ಕೋಡ್ತಿಲು ವಿನೋಬನಗರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಸಂಯೋಜಕ ನ. ಸೀತಾರಾಮ ಜಾಲ್ಸೂರು, ಜೀರ್ಣೋದ್ಧಾರ ಸಮಿತಿ ಪ್ರದಾನ ಕಾರ್ಯದರ್ಶಿ ಶರತ್ ಅಡ್ಕಾರು, ಕೋಶಾಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮೋಹನ ನಂಗಾರು, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ ಅಡ್ಕಾರು – ಬೀರಮಂಗಲ, ನಿತಿನ್ ಅರ್ಭಡ್ಕ, ಕೋಶಾಧ್ಯಕ್ಷ ಮುರಳೀಧರ ಅಡ್ಕಾರು, ಕಛೇರಿ ವ್ಯವಸ್ಥಾಪಕ ಹರ್ಷಿತ್ ದೇರಾಜೆ – ಪೇರಾಲು, ಉತ್ಸವ ಸಮಿತಿ ಉಪಾಧ್ಯಕ್ಷರುಗಳು, ಜಾತ್ರೋತ್ಸವದ ಉಪಸಮಿತಿಯ ಪದಾಧಿಕಾರಿಗಳು, ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.