ಮೂಲತ: ಕನಕಮಜಲಿನವರಾಗಿದ್ದು, ಮಂಡ್ಯ ನಗರದಲ್ಲಿ ಪ್ರತಿಷ್ಠಿತ ಭರತನಾಟ್ಯ ಸಂಸ್ಥೆಯಾದ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ನಡೆಸುತ್ತಿರುವ ಡಾ. ಚೇತನಾ ರಾಧಾಕೃಷ್ಣ ಪಿ.ಎಂ. ಅವರ ಸಂಸ್ಥೆಯಲ್ಲಿ ಎರಡು ದಿನಗಳ ಭರತನಾಟ್ಯ ಕಾರ್ಯಾಗಾರವು ಫೆ.22 ಮತ್ತು 23ರಂದು ನಡೆಯಲಿದೆ.
ಫೆ.22. ಮತ್ತು 23ರಂದು ಎರಡು ದಿನಗಳ ಕಾಲ ನಿರಂತರವಾಗಿ ಭರತನಾಟ್ಯ ಕಾರ್ಯಾಗಾರವನ್ನು ನಡೆಸಿಕೊಡಲು ಚೆನ್ನೈಯ ಕಲಾಕ್ಷೇತ್ರ ಫೌಂಡೇಶನ್ ಅಡ್ಯಾರ್ ಸಂಸ್ಥೆಯ ನಿರ್ದೇಶಕಿ, ಹಿರಿಯ ಗುರುಗಳಾದ ಡಾ. ರೇವತಿ ರಾಮಚಂದ್ರನ್ ರವರು ಆಗಮಿಸಲಿದ್ದಾರೆ.
ಭರತನಾಟ್ಯದಲ್ಲಿ ಮೇಲತ್ತೂರು ಶೈಲಿಯ ವಿದ್ವಾಂಸರಾದ ಡಾ. ರೇವತಿ ಅವರು ಭರತನಾಟ್ಯದ ಮೇಲತ್ತೂರು ಶೈಲಿಯ ವೈಶಿಷ್ಟ್ಯಗಳನ್ನು ತಿಳಿಸಿಕೊಡುತ್ತಾ ಇದೇ ಶೈಲಿಯಲ್ಲಿ ಸಂಯೋಜಿತವಾದ ಕೃತಿ ಒಂದನ್ನು ಹೇಳಿಕೊಡುತ್ತಿದ್ದಾರೆ .ಭರತನಾಟ್ಯದ ಕಲಿಕೆಯಲ್ಲಿ ಸೀನಿಯರ್ ಹಾಗೂ ವಿದ್ವತ್ ಹಂತದಲ್ಲಿರುವ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ನಡೆಸಿಕೊಡುತ್ತಿರುವ ಕಾರ್ಯಾಗಾರದಲ್ಲಿ ಮಂಡ್ಯ, ಮೈಸೂರು, ಬೆಂಗಳೂರು, ಹಾಸನ ಹಾಗೂ ಶಿವಮೊಗ್ಗ ಇತ್ಯಾದಿ ಊರುಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.