ಆರ್ಟ್ ಆಫ್ ಲೀವಿಂಗ್ ಸುಳ್ಯ ಘಟಕದ ವತಿಯಿಂದ ಕನಕಮಜಲಿನ ಶ್ರೀ ಹರಿಗೌರಿ ಸ್ಮಾರಕ ಪ್ರೌಢಶಾಲಾ ವಠಾರದಲ್ಲಿ ಫೆ.13 ರಿಂದ 16 ರ ತನಕ ಹಮ್ಮಿಕೊಂಡ ಜೀವನ ಕಲೆ ಶಿಬಿರ ಭಾಗ || ರ ಉನ್ನತ ಧ್ಯಾನ ಶಿಬಿರವು ಸಮಾಪನಗೊಂಡಿತು.

ಸಂಸ್ಥೆಯ ಶಿಕ್ಷಕ ಸುನಿಲ್ ಚಂದ್ರ ಹಾರ್ವೆಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಶಾಲಾ ಸಂಚಾಲಕ ಪದ್ಮನಾಭ ಭಟ್, ಸಂಸ್ಥೆಯ ಶಿಕ್ಷಕ ರಾಮಕೃಷ್ಣ ಭಟ್,ಶ್ರೀಮತಿ ಸುನಿತಾ ಬೊಂಡಾಲ ರವರು ಸಹಕರಿಸಿದರು. ಸ್ಥಳೀಯರು ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಸಂಘಟಕರಾದ ಶ್ರೀಮತಿ ಉಷಾ ಕಾನತ್ತಿಲ ಮತ್ತು ಸುಧೀಂದ್ರ ಭಟ್ ಕಾರ್ಯಕ್ರಮದ ಸಂಯೋಜಕರಾಗಿದ್ದರು.