ಭಾವ ತೀರ ಯಾನ ಫೆ. 21 ರಂದು ಬಿಡುಗಡೆ

0

ಶುಕ್ರವಾರ, ಶನಿವಾರ ಪುತ್ತೂರಿನ ಜಿ.ಎಲ್. ವನ್ ಮಾಲ್ ನಲ್ಲಿ ಪ್ರದರ್ಶನ

ಸುಳ್ಯದ ಮಯೂರ್ ಅಂಬೆಕಲ್ ಕತೆ, ಚಿತ್ರ ಕತೆ ಬರೆದು ಸಂಗೀತ ನಿರ್ದೇಶನ ಮತ್ತು ನಿರ್ದೇಶನ ಮಾಡಿದ ” ಭಾವ ತೀರ ಯಾನ ” ಕನ್ನಡ ಚಲನ ಚಿತ್ರ ಫೆ. 21 ಶುಕ್ರವಾರದಂದು ಬಿಡುಗಡೆಗೊಳ್ಳಲಿದ್ದು ರಾಜ್ಯದಾದ್ಯಂತ ಪ್ರದರ್ಶನ ಕಾಣಲಿದೆ.

ಪುತ್ತೂರಿನ ಜಿ.ಎಲ್. ವನ್ ಮಾಲ್ ನ ಭಾರತ್ ಸಿನೆಮಾಸ್ ನಲ್ಲೂ ಶುಕ್ರವಾರದಿಂದ ತೆರೆ ಕಾಣಲಿದ್ದು ಮೊದಲಿನ ಎರಡು ದಿನಗಳಲ್ಲಿ ಸಂಜೆ 4 ಗಂಟೆಗೆ ಸಮಯ ನಿಗದಿಯಾಗಿದೆ. ಶುಕ್ರವಾರ ಪ್ರದರ್ಶನದ ಮೊದಲು ಪುಟ್ಟ ಉದ್ಘಾಟನಾ ಸಮಾರಂಭ ನಡೆಯಲಿದೆ.