ಎಡಮಂಗಲ ಗ್ರಾಮದ ಹೇಮಳ ಭ್ರಮರಾಂಭಿಕಾ ನಿಲಯದ ದಿ. ರಾಮಣ್ಣ ಗೌಡರ ಪತ್ನಿ ಶ್ರೀಮತಿ ಯಮುನಾ ಫೆ. 18ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ ಅಂದಾಜು 74 ವರ್ಷ ವಯಸ್ಸಾಗಿತ್ತು.
ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ ಹೇಮಳರ ಮನೆಯಲ್ಲಿ ವಾಸವಾಗಿದ್ದ
ಮೃತರು ಪುತ್ರಿ ಶ್ರೀಮತಿ ಕಾವ್ಯ ಬಾಲಕೃಷ್ಣ ಗೌಡ ಕುರ್ಮಕೋಡಿ, ಸಹೋದರ ರುಕ್ಮಯ್ಯ ಗೌಡ ಕಟ್ಟತ್ತಾರು, ಕಳಂಜ, ಸಹೋದರಿಯರಾದ ಶ್ರೀಮತಿ ಕಮಲ ರಾಮಣ್ಣ ಗೌಡ ಅಳ್ಪೆ, ಶ್ರೀಮತಿ ಪೊನ್ನಮ್ಮ ಯೇನೆಕಲ್ಲು ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಯಮುನಾರವರು ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನಕ್ಕೆ ಸುಮಾರು 2 ಎಕ್ರೆಯಷ್ಟು ಜಾಗವನ್ನು ದಾವಾಗಿ ನೀಡಿದ್ದರು.


