ಕಲ್ಮಡ್ಕ: ದಿವಾಕರ ಮೂಲ್ಯ ಮಾಳಪ್ಪಮಕ್ಕಿ ಹೃದಯಾಘಾತದಿಂದ ನಿಧನ

0

ಕಲ್ಮಡ್ಕ ಗ್ರಾಮದ ಮಾಳಪ್ಪಮಕ್ಕಿ ನಾರಾಯಣ ಮೂಲ್ಯ ರವರ ಪುತ್ರ ದಿವಾಕರ ಮೂಲ್ಯ ರವರು ಫೆ.21 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 55 ವರುಷ ವಯಸ್ಸಾಗಿತ್ತು. ಸುಳ್ಯ ತಾಲೂಕು ಕುಲಾಲ ಸುಧಾರಕ ಸೇವಾ ಸಂಘದ ಪೂರ್ವ ನಿರ್ದೇಶಕರಾಗಿದ್ದರು.

ಮೃತರು ತಂದೆ, ಪತ್ನಿ ಶ್ರೀಮತಿ ಸೀತಾ, ಮಕ್ಕಳಾದ ಕೃತಿಕ್, ಮಿಥುನ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.