ವಿಶೇಷವಾಗಿ ಶ್ರೀ ಚಾರ್ವಕದ ಭಕ್ತರಿಂದ ಸೀಮೆ ದೇವಸ್ಥಾನಕ್ಕೆ ಪಾದಯಾತ್ರೆ
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.26 ರಂದು ಮಹಾಶಿವರಾತ್ರಿ ಆಚರಣೆ ವಿವಿಧ ವೈಧಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಪೂರ್ವಾಹ್ನ ಗಂಟೆ 8ರಿಂದ ರಾತ್ರಿ ಗಂಟೆ 8 ತನಕ ಭಜನಾ ಕಾರ್ಯಕ್ರಮ ಜರಗಲಿದೆ.
ವಿಶೇಷವಾಗಿ ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಕದ ಭಕ್ತರಿಂದ ಪಂಜ ಸೀಮೆಯ ದೇಗುಲಕ್ಕೆ ಪಾದಯಾತ್ರೆ ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇಗುಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಕದ ಭಕ್ತರಿಂದ ಪೂರ್ವಾಹ್ನ 7.00 ರಿಂದ ಸೀಮೆ ದೇವಸ್ಥಾನಕ್ಕೆ ಸೀಮೆ ದೇವಸ್ಥಾನಕ್ಕೆ ಚಾರ್ವಾಕ,ಕಾಣಿಯೂರು, ಪುಣ್ಚತ್ತಾರು,ನಿಂತಿಕಲ್, ಪಡ್ಪಿನಂಗಡಿ, ನಿಡ್ವಾಳ,ಪಂಜ ಮಾರ್ಗದಲ್ಲಿ ಪಾದಯಾತ್ರೆ ನಡೆಯಲಿದೆ. ಅವರಿಗೆ ಪಂಜ ಪೇಟೆ ದ್ವಾರದ ಬಳಿ (ಅಂದಾಜು ಬೆಳಿಗ್ಗೆ 11:00 ಗಂಟೆಗೆ) ಸ್ವಾಗತ ನಡೆದು, ಬಳಿಕ ಅವರೊಂದಿಗೆ ಶ್ರೀ ದೇಗುಲಕ್ಕೆ ಪಾದಯಾತ್ರೆ ನಡೆಯಲಿದೆ.
ದೇಗುಲದಲ್ಲಿ ಮಧ್ಯಾಹ್ನ ಶಿವಪೂಜೆ, ಮಹಾಪೂಜೆ, ರುದ್ರಾಭಿಷೇಕ, ರಾತ್ರಿ ಶಿವಪೂಜೆ, ಮಹಾಪೂಜೆ, ರುದ್ರಾಭಿಷೇಕ , ರಾತ್ರಿ 8 ರಿಂದ ಶ್ರೀ ದೇವರಿಗೆ ಏಕದಶರುದ್ರಾಭಿಷೇಕ, ರುದ್ರ ಪಾರಾಯಣ. ರಾತ್ರಿ ಗಂಟೆ 10ಕ್ಕೆ ಮಹಾಪೂಜೆ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ
ಪಾಲ್ಗೊಳ್ಳ ಬೇಕಾಗಿ ದೇಗುಲದ ಪ್ರಕಟಣೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು ವಿನಂತಿಸಿದ್ದಾರೆ.