ಪಂಜ: ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ

0

ಪಂಜ ಪೇಟೆ ಸಮೀಪ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಹಿಂದೂ ಕಾರ್ಯಕರ್ತರು ತಡೆದು ಪೋಲೀಸರಿಗೆ ಒಪ್ಪಿಸಿದ ಘಟನೆ ಫೆ.22ರಂದು ರಾತ್ರಿ ನಡೆದಿದೆ.


ಕೇರಳ ನೋಂದಾವಣೆ ಕಾರಿನಲ್ಲಿ ಬಳ್ಳಕ – ಪಂಜ ರಸ್ತೆಯಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದು, ಓರ್ವನ ವಶಕ್ಕೆ ಪಡೆಯಲಾಗಿದೆ. ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಆಗಮಿಸಿ ಜಾನುವಾರು , ಕಾರು ಮತ್ತು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.